ಕಾವ್ಯ ಸಂಗಾತಿ
ತಾಯ್ತನದ ಹಿರಿಮೆ
ಲಕ್ಷ್ಮೀದೇವಿ ಪತ್ತಾರ
ತಾಯಿಯಾದಳು ಅವಳು
ಬಹಳಷ್ಟು ಬದಲಾದಳು
ಮಗುನಿಂದಾಗಿ ಅವಳ ಬಿಗುವು
ಕಳೆದು ಆಗಿಹಳು ಮೃದು
ದೇಹ ಸೌಂದರ್ಯದ ಆರಾಧನೆಯಲ್ಲಿದ್ದವಳಿಗೆ
ದೇಹದ ಪರವೇ ಇಲ್ಲ
ಎದೆಹಾಲು ಕುಡಿಸುವದರಲ್ಲಿ ತಲ್ಲಿನ
ಮಗುವಿನಲಂಕಾರದಲ್ಲಿ ಮೈಮನ
ಮಲಮೂತ್ರ ಕಂಡರೆ
ಮೂಗು ಮೂರಿಯುತ್ತ
ಮಾರು ದೂರ ಓಡುತ್ತಿದ್ದವಳು
ಮೈಯೆಲ್ಲಾ ಹೇಸಿಗೆ
ಮಾಡಿಕೊಂಡ ಬರುವ ಕೂಸನೆತ್ತುವಳು ಆತುರದಿ
ಶುಚಿಗೊಳಿಸುವಳು ಬೇಸರಿಸದೆ
ಯಾರನ್ನು ಕೇರ್ ಮಾಡದೆ
ಮೋದಲು ತಾನುಂಡು ತಣಿಯುತ್ತಿದ್ದವಳಿಂದು
ಮಗುವಿಗೆ ಉಣುಸುವದರಲಿ
ತನ್ನ ಹಸಿವ ಮರೆತಿಹಳು
ಗಡದ್ದಾಗಿ ನಿದ್ದೆ ಹೊಡೆದು
ಪೂರ್ವದಲಿ ರವಿ ಮೂಡಿ
ಮೂರು ಘಳಿಗೆ ದಾಟಿದರು
ಏಳದವಳು
ಕರುಳ ಬಳ್ಳಿಗಾಗಿ ಹಗಲಿರುಳೆನ್ನದೆ
ಆರೈಕೆ ಮಾಡುವಳು
ನಿಜ ಮಾತೃತ್ವವನ್ನು ನೆನಪಿಸುವ ಕವಿತೆ. ಚೆನ್ನಾಗಿದೆ. ಅಭಿನಂದನೆಗಳು.
ತಾಯಿತನ ಎನ್ನುವುದೆ ಬದುಕಿನ ಮಮತೆಯ ತಿರುವು.
ಸೊಗಸಾಗಿ ಮಗಳಲ್ಲಿ ಕಂಡು ಸಾದರಪಡಿಸಿದ್ದಿರಿ….
ನಾಗಜಯನ ಅನಿಸಿಕೆ
Very beautiful lines sisters
ಸೊಗಸಾಗಿದೆ