ಅನುವಾದ ಕವಿತೆ: ದೇವರು….!?.

ಕಾವ್ಯ ಸಂಗಾತಿ

ದೇವರು….!?.

ಮಲಯಾಳಂ ಮೂಲರಾಜೇಶ್ ತಿರುವ ಚಿರ

ಕನ್ನಡಕ್ಕೆ ಐಗೂರು ಮೋಹನ್ ದಾಸ್, ಜಿ.

Angel in the clouds on blue sky

ಓ…. ದೇವರೇ…..,
ನೀನು…….,
ನಿನ್ನನ್ನು ಪೂರ್ಣವಾಗಿ
ಓದಲು ಹೇಳಿದೆ..!
ನಾನು ನನ್ನನ್ನು
ಮಾತ್ರ ಓದಿದೆ…!!!

ನೀನು…..,
ನಿನ್ನನ್ನು ಗಾಢವಾಗಿ
ಪ್ರೀತಿಸಲು ಹೇಳಿದೆ..!
ನಾನು ನನ್ನನ್ನು
ಮಾತ್ರ ಪ್ರೀತಿಸಿದೆ…!!!

ನೀನು…..,
ನಿನ್ನಲ್ಲಿ ವಿಶ್ವಾಸ – ನಂಬಿಕೆ
ಇಡುವಂತೆ ಹೇಳಿದೆ…!
ನಾನು ನನ್ನಲ್ಲಿ ಮಾತ್ರ
ವಿಶ್ವಾಸ – ನಂಬಿಕೆ ಇಟ್ಟೆ..!!!

ಕಾರಣ……,
ನೀನು ‘ಧಮ೯’ವಾಗಿಯೂ
ನಾನು ಮಾತ್ರ
‘ದೇವರು’ ವಾಗಿ
ಬಿಟ್ಟಿದ್ದೆ…!!!


Leave a Reply

Back To Top