ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಮಂಡಲಗಿರಿ ಪ್ರಸನ್ನ

ಚಿಂತಕರ ತತ್ವಗಳನು ತಿಳಿಸುವರೆಲ್ಲರು ಪಾಲಿಸುವವರಾರು
ಆದರ್ಶ ಬದುಕು ಮಾತಾಡುವರೆಲ್ಲರು ಪಾಲಿಸುವವರಾರು

ಜಗದ ತುಂಬಾ ಶಾಂತಿ ಸೌಹಾರ್ದತೆಯ ಬೊಗಳೆಗಳ ಕಂತೆ
ಬುದ್ಧನ ನೀತಿಗಳ ತೇಲಿಬಿಡುವರೆಲ್ಲರು ಪಾಲಿಸುವವರಾರು

ಆಚಾರ ಅನಾಚಾರಗಳು ದಿನಬೆಳಗಾದರೆ ಮೋಡಕಟ್ಟುತ್ತವೆ
ಬಸವಣ್ಣನ ವಿಚಾರಗಳ ಹೇಳುವರೆಲ್ಲರು ಪಾಲಿಸುವವರಾರು

ಗುಲಾಮಗಿರಿ ಕಿತ್ತೆಸೆಯಲು ಜೀವನವೆ ಸವೆಸಿದ ಧೀಮಂತರು
ನೆಲ್ಸನ್ ಗಾಂಧಿಗಿರಿ ಕೊಂಡಾಡುವರೆಲ್ಲರು ಪಾಲಿಸುವವರಾರು

ಸಮಾನತೆಗೆ ಸಂವಿಧಾನ ಸೃಷ್ಟಿಸಿದ ಮಹಾಮಾನವತಾವಾದಿ
ಅಂಬೇಡ್ಕರ್ ತತ್ವಗಳ ಹೊಗಳುವರೆಲ್ಲರು ಪಾಲಿಸುವವರಾರು


About The Author

Leave a Reply

You cannot copy content of this page