ಹಮೀದಾಬೇಗಂ ದೇಸಾಯಿ- ಕವಿತೆಗಳು

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ರಾಷ್ಟ್ರಪಿತನಿಗೆ ನುಡಿ ನಮನ

ಮುಷ್ಠಿಯಲಿಹಿಡಿಸುವಕಾಯದಲಿ
ಒಂದಿಷ್ಟು ಮೂಳೆಮಾಂಸರಕ್ತ
ಅದರೊಳಗಾಧ ಚೇತನದಚಿಲುಮೆ
ಮೊಗದಲಿಕಂದನಮುಗ್ಧನಗು

ಸತ್ಯ ಅಹಿಂಸೆಯಮಂತ್ರನುಡಿದು
ಜಗವನೇಮಂತ್ರಮುಗ್ಧಮಾಡಿ
ಶಾಂತಿಯನು ಬಿತ್ತಿಬೆಳೆದು
ಹಿಂಸೆಯಸದ್ದಡಗಿಸಿದಮಹಿಮ

ಪಾರತಂತ್ರ್ಯದಸಂಕೋಲೆಯಲಿ
ಸಿಲುಕಿನರಳಿದವರೆಷ್ಟೋ
ಸ್ವಾತಂತ್ರ್ಯ ಸಂಗ್ರಾಮದಬೆಂಕಿಯಲಿ
ಬೆಂದು ಹುತಾತ್ಮರಾದವರೆಷ್ಟೋ

ನೊಂದರೂಧೃತಿಗೆಡದೆಛಲಹೊಂದಿ
ಭಾರತಿಯಸೆರೆಬಿಡಿಸಿದಮಹಾತ್ಮ
ನಿನ್ನ ಜನುಮದಿನವಿಂದುರಾಷ್ಟಪಿತ
ನನ್ನನುಡಿನಮನನಿನಗೆ ಗಾಂಧಿ ತಾತ..

*******************

ಅನ್ನದಾತನ ಪ್ರಿಯ ಸಜ್ಜನಿಕೆಯ ಪ್ರತಿ ರೂಪ ಇವರಿಹರು ನೋಡು
ದೇಶ ಕಾಯುವ ಸೈನಿಕರ ಭಕ್ತಿಯ ಸೇವಕ ಎನಿಸಿಹರು ನೋಡು

ಸತ್ಯ ಪ್ರಾಮಾಣಿಕತೆಯ ಮೈಗೂಡಿಸಿಕೊಂಡವರಲ್ಲವೇ
ಸರಳ ಮುಗ್ಧ ಮನಸಿನ ಮಾನವ್ಯ ಬಂಧುತ್ವ ಗಳಿಸಿಹರು ನೋಡು

ಅಧಿಕಾರದ ಹೊನ್ನ ಗದ್ದುಗೆಯ ಏರಿಯೂ ತಾ ಪ್ರಭುವಾಗಲಿಲ್ಲ
ದೇಶದ ಪ್ರಜೆಗಳು ಹೃದಯ ಸಿಂಹಾಸನದಿ ವಿರಾಜಿಸಿಹರು ನೋಡು

ಧರ್ಮದ ದಾರಿಯಲಿ ನಡೆದ ಧೀಮಂತ ನಾಯಕ ಶಾಸ್ತ್ರಿಜೀ
ನಿಸ್ವಾರ್ಥ ಸೇವೆಯಲಿ ತೊಡಗಿ ಕರ್ತವ್ಯವನು ಅರಿತಿಹರು ನೋಡು

ಹೆತ್ತಬ್ಬೆ ಭಾರತಮಾತೆಯ ವರಪುತ್ರ ಲಾಲ್ ಬಹಾದ್ದೂರ್
ಅಜರಾಮರರಾಗಿ ಬೇಗಂ ಧ್ರುವತಾರೆಯಂತೆ ಬೆಳಗಿಹರು ನೋಡು.


Leave a Reply

Back To Top