ಜಿ.ಎಸ್.ಶರಣು-ನಾ ಶಾಲೆಗೋಗುವ ದಾರಿಯಲ್ಲಿ

ಕಾವ್ಯಸಂಗಾತಿ

ನಾ ಶಾಲೆಗೋಗುವ ದಾರಿಯಲ್ಲಿ

ಜಿ.ಎಸ್.ಶರಣು

ನಾ ಶಾಲೆಗೋಗುವ ದಾರಿಯಲ್ಲಿ
ಅಪರಿಚಿತ ತಾಯಿಯೊಬ್ಬಳು
ಅರಚುತ್ತಿದ್ದಳು ಕಿರುಚುತ್ತಿದ್ದಳು
ಆಕೆಯ ನೋವು
ಆಕೆಯ ಕಣ್ಣೀರಿನಲ್ಲೇ ಕಾಣುತ್ತಿತ್ತು
ಆ ತಾಯಿ ನನಗ್ಯಾರು ಗೊತ್ತಿಲ್ಲ
ಒಟ್ನಲ್ಲಿ ಬಂಧುವಾಗಿ ಕಾಣ್ತಿದ್ಲು

ಯಾರನ್ನೋ ಬೈಗುಳಗಳಿಂದ ಬೈಯುತ್ತಿದ್ದಳು
ಸಾಪ್ಳಿಸಿ ಸರಮಣಿ ಕಟ್ಟುತ್ತಿದ್ದಳು
ಆ ತಾಯಿಯ ಸುತ್ತುವರಿದು
ಜನಜಂಗುಳಿ ನಿಂತಿತ್ತು
ಸಮಾಧಾನ ಮಾಡುವರಿಲ್ಲ
ಸಮಾಧಾನ ಪಡಿಸುವರಿಲ್ಲ
ಎಲ್ಲರು ನಿಂತುನೋಡುವರಾಗಿದ್ದರು

ಆಕೆಯ ವಯಸ್ಸಾದ ಗಂಡ ಮಾತ್ರ
ಜೋರಾದ ಕಣ್ಣೀರಿಡುತ್ತ
ತನ್ನ ಮನದಲ್ಲಿದ್ದ ಆಕ್ರಂದನವನ್ನ
ಕುಡುಗೋಲು ಹಿಡ್ಕೊಂಡು ಹೊರ ಹಾಕ್ತಿದ್ದ
ಅದರಲ್ಲಿ ದುಃಖದ ಮುಗ್ಧತೆ ಮಾತ್ರ ಇತ್ತು

ಅಲ್ಲಿ ಸೇರಿದ್ದವರು ಒಬ್ಬೊರಿಗೊಬ್ಬರು
ಕರುಣೆಯ ಮಾತುಗಳನ್ನ ಆಡಿಕೊಳ್ಳುತ್ತಿದ್ರು
ಆಕೆ ಇಪ್ಪತ್ತು ವರುಷದ ಮಗಳು
ಪೀರುತಿ ಪ್ರೇಮ ಮಾಡಿ
ತಂದೆ-ತಾಯಿಯನ್ನ ಒದ್ದು
ಮತ್ತೊಬ್ಬ ರೋಡ್-ರೋಮಿಯೋನ
ಜೋಡಿ ಓಡಿ ಹೋಗಿದ್ಲು

ತುತ್ತಿಟ್ಟು ಸಾಕಿದ್ಲು ಆ ತಾಯಿ
ಒಬ್ಳೆ ಮಗ್ಳು ಎನ್ನುವುದಕ್ಕೆ
ಊರು ತುಂಬಾ ಮೆರಿಸಿದ್ಲು
ಸಾವಿರಾರ ಕನಸ್ಸುಗಳನ್ನ
ಮಗಳ ಮ್ಯಾಲೆ ಹೋತ್ತಿದ್ಲು
ಆ ನಂಬಿಕೆಗೆ ದ್ರೋಹ ಬಗೆದು
ಈಕೆ ಹೇಳ್ದೆ – ಕೇಳ್ದೆ
ಮತ್ತೊಬ್ಬನ ಜೋಡಿ ಊರು ಬಿಟ್ಟಿದ್ಲು
ಆ ತಾಯಿ ಈ ನೋವನ್ನ ತಡೆದುಕೊಳ್ಳಲಾರದೇ
ಹುಚ್ಚಿ ತರ ಮಾಡುತಿದ್ಲು


Leave a Reply

Back To Top