ಮಕ್ಕಳ ಕವಿತೆ -ನನ್ನ ಶಾಲೆ

ಮಕ್ಕ:ಳ ಕವಿತೆ

ನನ್ನ ಶಾಲೆ

ಬಾಪು ಖಾಡೆ

ಆಡಿ ಹಾಡಿ ಕೂಡಿ ಕುಣಿದು
ನಕ್ಕು ನಲಿದ ನನ್ನ ಶಾಲೆ
ಗೆಳೆಯರೊಡನೆ ಆಟವಾಡಿ
ಸೋತು ಗೆದ್ದ ನನ್ನ ಶಾಲೆ

ಸ್ನೇಹ ಕರುಣೆ ವಿದ್ಯೆ ವಿನಯ
ಬಿತ್ತಿ ಬೆಳೆದ ನನ್ನ ಶಾಲೆ
ಸತ್ಯ ಶಾಂತಿ ನೀತಿ- ನಿಯಮ
ಎತ್ತಿ ಹಿಡಿದ ನನ್ನ ಶಾಲೆ

ಕೂಡಿ ಕುಳಿತು ಊಟ ಮಾಡಿ
ಹಂಚಿ ತಿಂದ ನನ್ನ ಶಾಲೆ
ಚಿತ್ರ ಬಿಡಿಸಿ-ವೀಣೆ ನುಡಿಸಿ
ನೃತ್ಯ ಕಲಿಸಿದಂತ ಶಾಲೆ

ಓದಿ ಬರೆದು ಅರಿತು ನಡೆವ
ಬೆಳಕು ಕೊಟ್ಟ ನನ್ನ ಶಾಲೆ
ಲೆಕ್ಕ ಬಿಡಿಸಿ ಜ್ಞಾನ ಉಣಿಸಿ
ಅನ್ನ ಕೊಟ್ಟ ನನ್ನ ಶಾಲೆ

ಅಳತೆ ತೂಕ ಎಣಿಕೆ ಲೆಕ್ಕ
ಹೇಳಿ ಕೊಟ್ಟ ನನ್ನ ಶಾಲೆ
ಶಿಸ್ತು ಸಮತೆ ಅರಿವು ನೀಡಿ
ಬದುಕು ಕೊಟ್ಟ ನನ್ನ ಶಾಲೆ


Leave a Reply

Back To Top