ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ತನಗಗಳು

ನಿಂಗಮ್ಮ ಭಾವಿಕಟ್ಟಿ

1
ಆಸ್ಪತ್ರೇಲಿ ಬೆಳಿಗ್ಗೆ
ದೇವರ ಹುಡುಕಿದೆ
ಅಷ್ಟೊತ್ತಿಗೆ ಡಾಕ್ಟರ್
ಬಂದರು ಕೈಮುಗಿದೆ.

2
ಕೆಲವು ಸಾಂತ್ವನಕೆ
ಮನ ಸ್ಪಂದಿಸೋದಿಲ್ಲ
ಗಾಯಕೆ ಮುಲಾಮುಂಟು
ನೋವಿಗೆ ಇರೋದಿಲ್ಲ.

3
ಕುದಿಯುವ ರಕ್ತಕೆ
ಕರಗುವುದು ನೀನೇ
ಶಾಂತವಾಗಿಸು ಮುಂಚೆ
ನವರತ್ನವಿಲ್ಲದೇ

4
ಆ ನವದುರ್ಗೆಯರು
ನಮ್ಮಲ್ಲೇ ಇರುವರು
ಸಮಯ ಬಂದಾಗೊಂದು
ಅವತಾರೆತ್ತುವರು

5
ವೇದ ಗೀತೆ ಓದಿಲ್ಲ
ಸದಾ ಹಸನ್ಮುಖದ
ಮಗುವಿನಂತಿರಲು
ಸಂದರ್ಭ ಬಿಡೋದಿಲ್ಲ


About The Author

Leave a Reply

You cannot copy content of this page

Scroll to Top