ಕಾವ್ಯ ಸಂಗಾತಿ
ಬಾಗೇಪಲ್ಲಿಯವರ ಗಜಲ್
ಪೊಳ್ಳು ಘನತೆ ಗಂಭೀರತೆ ಪ್ರದರ್ಶಿಸಲಿಲ್ಲಾ ಹತವಿಧೀ
ಅರಮನೆಯಲಿ ತನ್ನ ಮುಗ್ಧತೆ ಮುಚ್ಚಿಡಲಿಲ್ಲ ಹತವಿಧೀ
ಆಕೆ ಅಂದವ ಚಿತ್ರ ಸೆರೆ ಹಿಡಿಯ ಬಯಸಿದ್ದು ಎಷ್ಟು ಜನ
ಪಾಪಿಗಳಿಗೆ ಆಕೆಯ ಸ್ಥಿತಿಯ ಅರಿವಿರಲಿಲ್ಲ ಹತವಿಧೀ
ಪುಟ್ಟ ಮಕ್ಕಳೆಂದರೆ ಎಷ್ಟು ಪ್ರೀತಿ ಆ ಕೋಮಲ ಯುವರಾಣಿಗೆ
ಪ್ರೀತಿಸಿದ ಗಂಡನೇ ಅದನು ಅರಿಯಲಿಲ್ಲಾ ಹತವಿಧೀ
ರೀತಿ ರಿವಾಜ್ ಮುಖ್ಯವೆನಿಸಿತು ಮಹಾ ಸಾಮ್ರಾಜ್ಞಿಗೆ
ಸತ್ತ ನಂತರ ಕರೀಟದ ಬಗ್ಗೆ ಯೋಚಿಸಲಿಲ್ಲ ಹತವಿಧೀ
ಕೃಷ್ಣಾ! ರಾಣಿಯೆಂಬ ಬಿರದನೂ ಹೆಸರಿಂದ ತೆಗೆದು ಹೂಳಿದರು
ಕಾಪಿಟ್ಟ ರಿವಾಜುಗಳು ಕೊಂಡೊಯ್ಯಲಿಲ್ಲಾ ಹತವಿಧೀ