ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳರವರ ಗಜಲ್
ನೋವನ್ನು ಸಹಿಸಿಕೊಂಡು ಇರುವೆಯಲ್ಲ ನೀ ಮಾತಾಡಬಹುದಿತ್ತು
ಸಾವನ್ನು ಅರಸಿಕೊಂಡು ಹೋಗುವೆಯಲ್ಲ ನೀ ಮಾತಾಡಬಹುದಿತ್ತು
ಗಗನ ಕುಸುಮವಾಯಿತಲ್ಲ ಈ ಮಧುರವಾದ ಪ್ರೀತಿಯ ತೇರು
ದೃಗುಜಲ ಸುರಿಸಿಕೊಂಡು ಅಳುವೆಯಲ್ಲ ನೀ ಮಾತಾಡಬಹುದಿತ್ತು
ಸಾರಸಗಟವಾಗಿ ಹರಿದು ಬಂತು ಒಲವಕಾವ್ಯ ವಾರಿಧಿಯ ಅಲೆ
ಭಾರವನು ಹೇರಿಸಿಕೊಂಡು ನಡೆವೆಯಲ್ಲ ನೀ ಮಾತಾಡಬಹುದಿತ್ತು
ಚಿತ್ತಚಾಂಚಲ್ಯದಿ ಮುಳುಗಿ ವಿರಹದುರಿಯಲ್ಲಿಬೆಂದಿರುವೆಯಲ್ಲ ಸಖಿ
ಮತ್ತೆಮತ್ತೆ ಮುನಿಸಿಕೊಂಡು ಬೆರೆವೆಯಲ್ಲ ನೀ ಮಾತಾಡಬಹುದಿತ್ತು
ಮೌನಿಯಾಗಿ ಮನದಲ್ಲಿ ಕೊರಗುವೆ ಅಭಿನವನ ನೆನೆಯದೆ ಇದ್ದೆ
ಯಾನದಲಿ ದುಃಖಿಸಿಕೊಂಡು ನೋಡುವೆಯಲ್ಲನೀ ಮಾತಾಡಬಹುದಿತ್ತು