ಸುಲೋಚನಾ ಮಾಲಿಪಾಟೀಲ ಕವಿತೆ-ರೇಡಿಯೋ

ಕಾವ್ಯ ಸಂಗಾತಿ

ರೇಡಿಯೋ

ಸುಲೋಚನಾ ಮಾಲಿಪಾಟೀಲ

ನಮ್ಮೆಲ್ಲರ ಪರಮಮಿತ್ರ ನಾವಿದ್ದೆವು ನಿನ್ನ ಹತ್ತಿರ
ಶುಭೋದಯಕೆ ಮಂಗಲವಾದ್ಯ ತಂದ ಶುಭಕರ
ನಿನ್ನ ಅಗತ್ಯತೆಯಲ್ಲಿ ಸಂಭ್ರಮಿಸಿದ ಜನಸಾಗರ
ನಿನ್ನಿಂದ ವಿವಿಧತೆಯಲ್ಲಿ ಜನಮನ ರಮಿಸುವ ಕಾರ್ಯ

ನಿನಾಗಿದ್ದೆ ಎಲ್ಲಾ ಮನೆಯ ಶೋಭೆಯ ಸರದಾರ
ಹಲವಾರು ರೂಪುಗಳಲ್ಲಿ ರೂಪಗೊಂಡ ನಿನ್ನ ಆಕಾರ
ನಿನ್ನ ಮೋದಲ ಅಡಿಗಲ್ಲು ಸ್ಥಾಪನೆ ನಮ್ಮ ಮೈಸೂರ
ಆಕಾಶವಾಣಿಯ ಪದಕೆ ಪದಚಾಲನೆ ನೀಡಿದ ಠಾಗೋರ್

ಮುಸಂಜೆಯ ಶಾಸ್ತ್ರೀಯ ಸಂಗೀತ ಗಾನದ ಸುಮಧರ
ಬಿನಾಕಾ ಗೀತಮಾಲಾ ಕೇಳುತ್ತಿದ್ದೆವು ಪ್ರತಿಬುಧವಾರ
ಉದಯರಾಗ ಕವನ ವಾಚನ ಚಿತ್ರಗೀತೆಗಳು ಬಲು ಮಧುರ
ಮೆಲಕು ಹಾಕಲು ಬಿತ್ತರಿಸುತ್ತಿದ್ದೆ ಮೂಲ ಸಂಸ್ಕೃತಿಯ ಸಾರ

ಸಾಮಾಜಿಕ ಆರ್ಥಿಕ ಭೌಗೋಳಿಕ ತಾರತಮ್ಯದಲ್ಲು
ಪ್ರಕೃತಿ ವಿಕೋಪ ಯುದ್ಧ ತುರ್ತುಪರಿಸ್ಥಿತಿಗಳ ಸಮಯದಲ್ಲು
ಕ್ರೀಡೆ ಮನೋರಂಜನೆ ಸುದ್ದಿಯ ಪ್ರಾಮುಖ್ಯತೆಯಡಿಯಲ್ಲು
ಜಗತವಿಖ್ಯಾತವಾಗಿ ಮೆರೆದವನು ನೀನಲ್ಲವೇ ಮೊದಲು

ವಿವಿಧ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ
ಜಗತ್ತಿಗೆ ತಂತ್ರಜ್ಞಾನದ ಮೂಲಕ ಅರಿವಳಿಕೆಯ ನೀಡಿದ ಸಂಭ್ರಮ
ದಿನ ಬೆಳಗಾದರೆ ಗ್ರಾಮೀಣರು ಕೇಳುವ ರೇಡಿಯೋ ಮಾಧ್ಯಮ
ಬಹುಜನಹಿತಾಯ ತತ್ವದಡಿಯ ನಡೆಯುವೇ ನೀ ಸುಗಮ

ಓಲ್ಡ್ ಇಜ್ ಗೋಲ್ಡ್ ಎನ್ನುವ ನಿನ್ನ ಪಥ ಚಲನ
ಪೇಬ್ರುವರಿ ಹದಿಮೂರು ವಿಶ್ವ ರೇಡಿಯೋ ಆಚರಣೆ ದಿನ
ಜಗತ್ತಿನೆಲ್ಲೆಡೆ ಹಲವಾರು ಭಾಷೆಗಳಲ್ಲಿ ಪ್ರಚಲಿತವಾದ ವಿದ್ಯಮಾನ
ಆಲ್ ಇಂಡಿಯಾ ರೇಡಿಯೋ ಸರ್ವವ್ಯಾಪಿ ಕೈಗೆಟಕೂವ ನವಿಕರಣ


Leave a Reply

Back To Top