ಡಾ.ಡೋ ನಾ ವೆಂಕಟೇಶರ ಕವಿತೆ-ಸಂಧ್ಯಾಕಾಲ

ಕಾವ್ಯ ಸಂಗಾತಿ

ಸಂಧ್ಯಾಕಾಲ

ಡಾ.ಡೋ ನಾ ವೆಂಕಟೇಶ

ಎಲ್ಲಾ ಕಾಲಗಳಲ್ಲಿ
ಶ್ರೇಷ್ಠ ಸಂಧ್ಯಾಕಾಲ

ದೇಹ ಮುಪ್ಪಿನೆಡೆ ಹೆಜ್ಜೆಯಿಡುವೆಡೆ ,
ಮನ ಹಿಂತಿರುಗಿ
ನೋಡುವೆಡೆ
ಕಂದಾ ಪಯಣ ಸುಖಕರ

ಏಳುಬೀಳುಗಳ
ಗಿರಿ ಕಂದಕಗಳ ಕೆಳಗಿಂದ ಮೇಲೆ ಮೋಡಗಳ ಲಾಸ್ಯ
ಕಲ್ಪನಾ ಲಹರಿ ಅಷ್ಟೆ!!

ನಿನ್ನಷ್ಟದಂತಲ್ಲ ಬದುಕು.
ಬದುಕಿನ ತಿರುಳು
ಸ್ವಲ್ಪ ತಾಳ್ಮೆ ಸಹನೆ
ಬಹಳಷ್ಟು ವಿವೇಚನೆ ಅನುಕ್ಷಣದ ಅನುಸರಣೆ

ಇಲ್ಲದಿರೆ ಚಿನ್ನಾ ಈ
ಕ್ಷಣಭಂಗುರ
ಬದುಕು
ಏಳೇಳು ಜನ್ಮಕ್ಕೂ
ತದುಕು!!

ತದೇಕ ಚಿತ್ತನಾಗಿರು
ತನ್ಮಯನಾಗಿರು
ಅನುಸರಣೀಯನಾಗಿರು

ಅವಿಸ್ಮರಣೀಯನಾಗು ನಶ್ವರಕ್ಕೆ !!


12 thoughts on “ಡಾ.ಡೋ ನಾ ವೆಂಕಟೇಶರ ಕವಿತೆ-ಸಂಧ್ಯಾಕಾಲ

  1. “ಸಂದ್ಯಾಕಾಲ “ ಈ ಕವಿತೆ ನಮಗೆ ನವರಾತ್ರೀಯ
    ಹಬ್ಬದ ಅತಿ ಸುಂದರ ಉಡುಗರೆ. ಧನ್ಯವಾದಗಳು

  2. We all are. And I believe this is golden period until ofcourse this gold mine is exhausted.
    And thanks Usha!

  3. Fact of life. It’s a golden period until ofcourse this gold mine is definitely gets to be get exhausted
    Thanks Nagaraj!

Leave a Reply

Back To Top