ನಿಲ್ಲ ಬೇಡ-ಆದಪ್ಪ ಹೆಂಬಾ ಮಸ್ಕಿ ಕವಿತೆ

ಕಾವ್ಯಸಂಗಾತಿ

ನಿಲ್ಲ ಬೇಡ

ಆದಪ್ಪ ಹೆಂಬಾ

ಎತ್ತ ಸಾಗುತಿಹುದು
ನಮ್ಮ ಪಯಣ
ಸುತ್ತ ಬೆಳಕಿಹುದು
ಮನಸಲೇನೋ ತಲ್ಲಣ ||

ಭೋಗ ಭಾಗ್ಯಗಳುಂಟು
ಹೊಟ್ಟೆಗೆ ಹಸಿವಿಲ್ಲ
ತಂಪಿಸಿದ ಹವೆಯಂಟು
ತಲೆಯೊಳಗಿನ ಬಿಸಿ ತಣ್ಣಗಾಗುತಿಲ್ಲ ||

ಕಣ್ಣ ಮುಚ್ಚಿದೆ ಹೀಗೆ
ಆಲಿಸುತ ದಾಸ ವಾಣಿ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ನನ್ನ ಮನವೀಗ ಹಗುರ ಹಗುರ ||

ನಿರೀಕ್ಷೆಗಳ ಮಿತಿ ಇರಲಿ
ಬರುವ ಪರೀಕ್ಷೆಗಳೆಂಥವೊ
ಎಲ್ಲದಕು ಸಿದ್ಧತೆ ಇರಲಿ
ನಾಳೆ ನಿನ್ನದಲ್ಲವೋ ||

ನಾಳೆಯ ಕನಸು ಕಾಣಬೇಡ
ಗತಿಸಿದ ನಿನ್ನೆಯ ಚಿಂತೆ ಬೇಡ
ಇಂದು ಮಾತ್ರ ನಿನ್ನದು ನೋಡ
ಅರಿತು ಮುನ್ನಡೆ ನೀ- ನಿಲ್ಲಬೇಡ ||


Leave a Reply

Back To Top