ಕಾವ್ಯ ಸಂಗಾತಿ
ಚೌಕಾಭಾರ
ಶಾರು
ಮಾತಿನ ಪಿಸು ಮಂಟದಲಿ
ಹರವಿ ಕೊಂಡು ಕುಳಿತ
ಚೌಕಾಭಾರದ ಪಟದೊಳಗೆ
ಮಾತು ಮೌನಗಳ
ಕಾಯಿಗಳದೇ ದರ್ಭಾರು,
ಎದುರಾಳಿ ನೀನಿರಲು
ಮತ್ತೆ ನಾನಿರಲು
ಸೋಲೂ! ಗೆಲುವೆ ನನಪಾಲಿಗೆ,
ಮಾತಿಗೊಂದು ಗರ ಬಿದ್ದರು
ಮನದೊಳಗೆ ನುಗ್ಗುವ
ಸರದಿಗದು ಜಿದ್ದು ಒಮ್ಮೊಮ್ಮೆ !
ಮೌನದ ಸದ್ದಿಗು ಮುನ್ನೆಡವ
ಕವಡೆ ಕಾಯಿಗಳ ನಡೆಗೆ
ಆರು ಮೂರು ಹುಸಿ ಮುನಿಸು,
ಲೆಕ್ಕ ತಪ್ಪದಂತ ಸಹನೆಗೆ
ಅರೇ! ಘಟ್ಟವಿದೆ ಇಲ್ಲಿ
ವಿರಮಿಸಲು ಸುಮ್ಮಗೆ
ಒಪ್ಪು ತಪ್ಪುಗಳ ತುಲನೆಗೆ,
ಸಮಾಧಾನಿಸಲು ಮತ್ತೆ
ಎದೆಗೊರಗಲು,
ಮಾತು ಮೌನಗಳ
ತಾನಾದ ತನನದ ತಾನನಕೆ
ಆಟ ಪಾಠಗಳು ನೆಪ ಮಾತ್ರ
ಉಳಿದಿದ್ದೆಲ್ಲವು ಬರಿ ಒಲವು
ಕಂಡರಿತರು ಅರಿಯದಿದ್ದರು
ಅರಿವಿದೆ ನನ್ನೊಳಗು
ಮತ್ತೆ ನಿನ್ನೊಳಗು
ಸೋತರು, ಗೆಲವು ಎನುವ
ಬಾಳ ಪಾಠ ಈ ಆಟ…,
ಶಾರು
Super
Nice