ಮರುಳಸಿದ್ದಪ್ಪ ದೊಡ್ಡಮನಿ-ಗಜಲ್

ಕಾವ್ಯಸಂಗಾತಿ

ಗಜಲ್

ಮರುಳಸಿದ್ದಪ್ಪ ದೊಡ್ಡಮನಿ

ನಿನ್ನ ನೆನಪಿನಲೆಯಲಿ ತೇಲಿ ಹೋಗಿರುವೆ ನಾನು
ನಿನಗಾಗಿ ಜೀವ ಹಿಡಿದು ಕಾದಿರುವೆ ನಾನು

ಬರಿ ವ್ಯಸನ ಬಿಟ್ಟು ಏನು ಉಳಿದಿಲ್ಲ
ಹಗಲು ರಾತ್ರಿ ಕಣ್ಣಿಗೆ ತುಂಬಿಕೊಂಡು ಕುಳಿತಿರುವೆ ನಾನು

ಇಂದಲ್ಲ ನಾಳೆ ನೀ ನನಗೆ ದಕ್ಕಿದರೂ
ದಕ್ಕಬಹುದೆಂದು ಸುಡುವ ನೆನಪುಗಳ ಹೊತ್ತು ನಿಂತಿರುವೆ ನಾನು

ಭರವಸೆಗಳೆಲ್ಲವೂ ಸುಳ್ಳಾಗಿ ಬದುಕು ನೆಲ ಕಚ್ಚಿದೆ
ಮುಕ್ತಿವನದ ಹಾದಿಯ ಮುಂದೆ ನಡೆದಿರುವೆ ನಾನು

ಮರುಳನೆದೆಯ ಮೇಲೆ ಹೂವು ಚೆಲ್ಲಿ ವಿದಾಯ ಹೇಳು
ಜಂಜಡ ಬೇಡವಾಗಿ ನೆಮ್ಮದಿಯಿಂದ ಮಲಗಿರುವೆ ನಾನು



Leave a Reply

Back To Top