ಕಾವ್ಯಸಂಗಾತಿ
ರತ್ನರಾಯಮಲ್ಲ-ಗಜಲ್
ನಿನ್ನ ಎದೆಯಲಿ ಬೆಚ್ಚಗಿರುವೆ ನಾನು
ನಿನ್ನ ನೆನಪಿನಲಿ ಜೀವಿಸಿರುವೆ ನಾನು
ಮೌನ ನಿನ್ನೊಂದಿಗೆ ಮಾತಿಗಿಳಿದಿದೆ
ನಿನ್ನ ನಗುವಿನಲಿ ನಲಿದಿರುವೆ ನಾನು
ಹಲವು ದಾರಿಗಳಿವೆ ನಮ್ಮ ಜಗದಲಿ
ನಿನ್ನ ಹೆಜ್ಜೆಯಲಿ ಸಾಗಿರುವೆ ನಾನು
ನೀನು ಇರದ ಬಾಳು ಮಸಣವಾಗಿದೆ
ನಿನ್ನ ಕನಸಿನಲಿ ಅರಳಿರುವೆ ನಾನು
ಮಲ್ಲಿಗೆ ಮೊಗ್ಗು ಬಿಡಲು ನೀನೆ ಬೇಕು
ನಿನ್ನ ಬದುಕಲಿ ನೆರಳಾಗಿರುವೆ ನಾನು
ಸಂಗಾತಿ ಅಂದ್ರೆ ಹೀಗೆ