ತಸ್ಮೆಶ್ರೀ  ಗುರುವೇ ನಮಃ                                    

ಶಿಕ್ಷಕ ದಿನಾಚರಣೆ ವಿಶೇಷ

ನಿಂಗಮ್ಮ ಭಾವಿಕಟ್ಟಿ

     ಭಾರತ ದೇಶದ ಪರಂಪರೆಯ ವೈಶಿಷ್ಟö್ಯವೆಂದರೆ ಗುರು ಶಿಷ್ಯ ಪರಂಪರೆ. ಅಮ್ಮ ಮಗುವಿನ ಮೊದಲ ಗುರುವಾದರೆ ಆನಂತರದ ಗುರುವೆಂದರೆ ಶಿಕ್ಷಕರು. ಮಕ್ಕಳ ಭವಿಷ್ಯ ರೂಪಿಸುವ ಪಥ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ ತಾಳ್ಮೆ ದೂರದೃಷ್ಟಿ, ಮಾನವತೆಗಳನ್ನು   ಬೋಧಿಸುವ ತನ್ಮೂಲಕವಿದ್ಯಾಥಿಗಳನ್ನು ದೇಶದ ಭವ್ಯ ಪ್ರಜೆಗಳಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತೀ ಮಹತ್ವದ್ದಾಗಿದೆ. ಎಷ್ಟೋ ಮನಸುಗಳನ್ನು ತಿದ್ದಿ ತೀಡಿಪುಟ್ಟ ಮಗುವನ್ನು ಒಂದು ಸುಂದರ ಶಿಲೆಯನ್ನಾಗಿ ಮಾಡುವ ಶಿಲ್ಪಿ ಶಿಕ್ಷಕ. ಆದರೆ ಶಿಕ್ಷಕರ ಈ ಶ್ರಮಕ್ಕೆ ಒಂದು ಧನ್ಯವಾದ ಹೇಳುವುದು ಪ್ರತಿ ಪಾಲಕರ ಕರ್ತವ್ಯವಾಗಿದೆ. ಅದಕ್ಕೆ ಶಿಕ್ಷಕರ ದಿನಾಚರಣೆ ಅತ್ಯಂತ ಸೂಕ್ತ ಸಂದರ್ಭವಾಗಿದೆ. ಗುರು ಎಂದರೆ ಕತ್ತಲಿನಿಂದ ಬೆಳಕಿನತ್ತ ಕರೆದೊಯ್ಯುವವನು.

ಈ ದಿನದಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುತ್ತಾರೆ.

    ೧೯೬೨ ರಿಂದಲೂ ಶಿಕ್ಷಕರ ದಿನಾಚರಣೆ ಸೆಪ್ಟಂಬರ್ ೫ ರಂದು ಆಚರಿಸಲಾಗುತ್ತಿದೆ. ವಿಶ್ವ ಶಿಕ್ಷಕರ ದಿನಾಚರಣೆಯನ್ನು ಅಕ್ಟೋಬರ್ ೫  ರಂದು ಆಚರಿಸುತ್ತಾರೆ.  ಜ್ಞಾನ ಕೊಡುವ ದಾರಿ ತೋರುವ ಗುರುವಾಗಿ ತನ್ನ ಜನುಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ೧೮೮೮ ಸೆಪ್ಟಂರ‍್ನಲ್ಲಿ ಚಿತ್ತೂರು ಜಿಲ್ಲೆಯ ತಿರುತ್ತಣಿ ಎಂಬ ಪವಿತ್ರ ಕ್ಷೇತ್ರದಲ್ಲಿ ಜನಿಸಿದರು. ರಾಧಾಕೃಷ್ಣನ್‌ರಿಗೆ ಆಧ್ಯಾತ್ಮದಲ್ಲಿ ಒಲವು. ಭಾರತದ ಮೊದಲ ಉಪರಾಷ್ಟçಪತಿಯಾಗಿ ಆಯ್ಕೆಯಾದ  ಅವರು ೧೯೬೨ ರಲ್ಲಿ ರಾಷ್ಟಪತಿಯಾದರು.  ೧೯೬೭ ರಲ್ಲಿ ಭಾರತರತ್ನರಾದರು. “ಶಿಕ್ಷಣದ ಅರ್ಥ ಮಕ್ಕಳಲ್ಲಿ ಮಾನವೀಯ ಗುಣ ಬೆಳೆಸುವುದು. ಬೌದ್ಧಿಕ ಶಕ್ತಿಗೆ ತರಬೇತಿ ಕೊಡುವುದು.” ಎನ್ನುತ್ತಿದ್ದ ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ದಿನ ವಿದ್ಯಾರ್ಥಿಗಳು ಚಿಕ್ಕ ಮಕ್ಕಳಂತೆ ಅತ್ತಿದ್ದರು. ಅವರನ್ನು ಅಂಕರಿಸಿದ ಟಾಂಗಾಗಾಡಿಯಲ್ಲಿ ತಮ್ಮ ಪ್ರೀತಿಯ ಗುರುವನ್ನು ಕೂರಿಸಿಆಟಾಂಗಾವನ್ನ ವಿದ್ಯಾರ್ಥಿಗಳು  ಗುರುಗಳ ಮನೆಯಿಂದ ಮೈಸೂರು ರೇಲ್ವೇ ನಿಲ್ದಾಣದವರೆಗೂ ತಾವೇ ಎಳೆದು ತಮ್ಮ ಗುರು ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಆ ದಿನ ಅಲ್ಲಿ ಝೀರೋ ಟ್ರಾಫಿಕ್ ನಿರ್ಮಾಣವಾಗಿತ್ತು. ರಾಧಾಕೃಷ್ನನ್ ರಿಗೆ ಕಣ್ ತುಂಬಿ ಬಂದಿದ್ದವು. ಒಬ್ಬ ಶಿಕ್ಷಕ ಈ ಮಟ್ಟಿಗೆ ಪ್ರೀತಿ ಪಾತ್ರರಾಗಬೇಕಾದರೆ ಆಗು ಯಾವ ಮಟ್ಟಗೆ ವಿದ್ಯಾರ್ಥಿಗಳನ್ನು ಪ್ರೀತಿಸಿರಬೇಕು?

    ಈಗ ಗುರುಗಳ ಮೇಲಿನ ಗೌರವ ಮೊದಲಿನಂತಿಲ್ಲ/ ಅದಕ್ಕೆ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ ಪೋಷಕರು ನಮ್ಮ ಸಾಮಾಜಿಕ ವ್ಯವಸ್ಥೆ, ಮಧ್ಯಮಗಳೂಸಹ ಕಾರಣ. ಶಿಕ್ಷಕರೂ ಸಹ ಹಲವೆಡೆ ದಾರಿ ತಪ್ಪುತಿದ್ದಾರೆ. ಅವರ ವರ್ತನೆ, ನಡವಳಿಕೆಗಳುಎಲ್ಲಾ ಸಂದರ್ಭಗಳಲ್ಲೂ ಅನುಕರಣೀಯವಾಗಿರುವುದಿಲ್ಲ.

    “ಅಂದೋ ಗುರುವಿದ್ದ ಮುಂದಕ್ಕೆ ಗುರಿಇತ್ತು

ನುಗ್ಗಿದುದು ಮುಂದೆ ಧೀರ ದಂಡು

ಇಂದೋ ಹಿಂದೆ ಗುರುವಿಲ್ಲ ಮುಂದೆ ಗುರಿ ಇಲ್ಲ

ಮುಗ್ಗಿತಿದೆ ಹಿಂದೆ ಹೋಡಿ ಹಿಂಡು_ ಎಂದಿದ್ದಾರೆ  ರಾಷ್ಟçಕವಿ ಕುವೆಂಪು

   ಮನುಷ್ಯ ಜೀವನದಲ್ಲಿ ಬರುವ ಮೂರು ಗುರುಗಳು

೧ )ಬಾಲ್ಯದಲ್ಲಿ ಸರಿ ತಪ್ಪುಗಳ ಅರಿವು ಮೂಡಿಸಿ ನಾವು ಸಮಾಜದಲ್ಲಿ ಹೊಂದಿಕೊAಡು ಬಾಳುವುದನ್ನು ಕಲಿಸುವ ಹೆತ್ತ ತಂದೆ ತಾಯಿಗಳು,

೨) ನಮಗೆ ಅನೇಕ ವಿಷಯಗಳನ್ನು ಕಲಿಸಿ ಸರ್ವಾಂಗೀಣ ಪ್ರಗತಿ ಮಾಡುವ ಶಿಕ್ಷಕರು.

೩)  ಆಧ್ಯಾತ್ಮಿಕ ಗುರುಗಳು ನಮಗೆ ಜೀವನದ ನಿಜವಾದ ಅರ್ಥ ತಿಳಿಸುತ್ತಾರೆ. ಇಹ ಪರವನೆಲ್ಲಾ ತೋರಿಸುವವ ಗುರು. ನೀ ಸಂದರ್ಭದಲ್ಲಿ ನೆನಪಾಗುವ ಗುರು ಶಿಷ್ಯರೆಂದರೆ ಶ್ರೀಕೃಷ್ಣಅರ್ಜುನ, ಶ್ರೀ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ, ಸಮರ್ಥ ರಾಮದಾಸ ಸ್ವಾಮಿ_ಶಿವಾಜಿ ಮಹಾರಾಜ. ಗುರುವಿನ ಕಲ್ಪನೆ ಅದ್ಭುತವಾದದ್ದು ಅಲ್ಲಮ ಪ್ರಭುಗಳು ಒಂದು ವಚನದಲ್ಲಿ ಹೀಗೆಹೇಳುತ್ತಾರೆ.

“ಕೃತಯುಗದಲ್ಲಿಶ್ರೀಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ

ಆಗಲಿ ಮಹಾಪ್ರಸಾದವೆಂದೆನಯ್ಯಾ

ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ದಿಯ ಕಲಿಸಿದರೆ

ಆಗಲಿ ಮಹಾಪ್ರಸಾದವೆಂದೆನಯ್ಯಾ

ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ

ಆಗಲಿ ಮಹಾಪ್ರಸಾದವೆಂದೆನಯ್ಯಾ

ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.”

 ಕಾಲದ ಬದಲಾದಂತೆ ಗುರು ಶಿಷ್ಯ ಪರಂಪರೆಯ ಅರ್ಥ ಬದಲಾಗುವ ಪರಿಗೆ ಬೆರಗಾಗಿದ್ದಾರೆ ಅಲ್ಲಮ ಪ್ರಭುಗಳು.

“ಬಂಧುಗಳಾದವರು ಬಂದುಂಡು ಹೋಗುವರು

ಬಂಧನನವ ಕಳೆಯಲರಿಯರು ಗುರುವಿಂದೆ ಬಂಧುಗಳುಂಟೆ  ಸರ್ವಜ್ಙ.”

 ಎಂದು ಗುರುವಿನ ಮಹತ್ವ ತಿಳಿಸಿದ್ದಾನೆ ಸರ್ವಜ್ಙ.

ಗುರು ಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೆöÊಶ್ರೀ ಗುರುವೇ ನಮಃ ಅಂದ ಮೇಲೆ ಗುರುವೇ ಸೃಷ್ಟಿ, ಸ್ಥಿತಿ, ಲಯಕಾರನೂ ಹೌದು.

    ಗುರು ದೊರೆತಾಗ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಮೊದಲನೆಯದಾಗಿ ಶರೀರದಲ್ಲಿ ಕೆಲವು ಬದಲಾವಣೆಗಳು ಗೋಚರಿಸುತ್ತವೆ. ಮೊದಲಿಗೆ ನೀವು ಬಯಸುತ್ತಿದ್ದ ಹಾಗೆ ಅದು ಕಾಣಲಾರಂಭಿಸುತ್ತದೆ. ಎರಡನೆಯದಾಗಿ ಶರೀರದಲ್ಲಿನ ಯಾವುದೇ ಕಾಯಿಲೆ ಅಥವಾ ಅಸಮತೋಲನ ಮಾಯವಾಗುತ್ತದೆ. ಮೂರನೆಯದಾಗಿ ಈಸೃಷ್ಟಿಯನ್ನು ನಡೆಸುವ ಶಕ್ತಿಯ ಅನುಭವವಾಗುತ್ತದೆ.

    ವಿಶ್ವದಾಖಲೆಯ ವೀರ ನೀರಜ್ ಚೋಪ್ರಾ ತನ್ನ ದೇಹ ತೂಕ ಇಳಿಸಿಕೊಲ್ಳಲು ಶಿವಾಜಿ ಸ್ಟೇಡಿಯಂ ನಲ್ಲಿ ಓಡುತ್ತಿರುತ್ತಾರೆ.  “ಈ ಜಾವೆಲಿನ್  ಎಸಿಯೋ ನೋಡೋಣ” ಎನ್ನುತ್ತಾರೆ ಅಲ್ಲೇ ಇದ್ದ ಜಾವೆಲಿನ್ ಪಟು ಜೈ ಚೌಧರಿ ಅಲ್ಲಿಗೆ ನೀರಜ ಚೋಪ್ರಾ ಅದೃಷ್ಟ ಬದಲಾಗಿ ಹೋಯಿತು ಆ ಜೈ ಚೌಧರಿ ಎಂಬ ಗುರುವಿನ ದೃಷ್ಟಿಗೆ ಬಿದ್ದ ನೀರಜ್ ಮೊನ್ನೆ ಓಲಂಪಿಕ್ಸ ನಲ್ಲಿ ಭಾರತಕ್ಕೆ ಸ್ವಾತಂತ್ರ್ಯ  ಸಿಕ್ಕ ಮೇಲೆ ಅಥ್ಲೆಟಿಕ್ ನಲ್ಲಿ ಮೊಟ್ಟ ಮೊದಲ ಚಿನ್ನ ಗೆದ್ದ ಹೆಮ್ಮೆಯ ಆಟಗಾರ ಎನ್ನುವ ಪ್ರಶಂಸೆಗೆ ಪಾತ್ರನಾದರು. ಅವರ ಆ ಗುರುವಿಗೆ ಈ ಮೂಲಕ ಒಂದು ದೊಡ್ಡ ಧನ್ಯವಾದ.

    ಶಿಕ್ಷಕ ಎಂದರೆ ನಮಗೆ ವಿದ್ಯೆ ಕಲಿಸಿದ ವ್ಯಕ್ತಿಗಳು ಮಾತ್ರವಲ್ಲ. ಪ್ರತಿಯೊಂದು ಘಟನೆಗಳೂ ಒಂದು ಅಧ್ಯಾಯದಂತೆ, ಪ್ರತಿಯೊಬ್ಬನೂ ಒಬ್ಬ ಗುರುವಿನಂತೆ,  ಅದನ್ನೇ ಇಂಗ್ಲೀಷಿನಲ್ಲಿ “ಎವ್ರಿ ಥಿಂಗ್ ಈಜ್  ಎ ಲೆಸ್ಸನ್, ಎವರಿ ಒನ್ ಈಜ್ ಎ ಟೀಚರ್”. ಎನ್ನುತ್ತಾರೆ. ಯಾರ ಮೆಚ್ಚುಗೆ ಬಯಸದೇ ಸುಮ್ಮನೇ ಅರಳಿ ಬಾಡಿ ಬಿದ್ದು ಹೋಗುವ ಹೂವು, ಬೆಳೆಯುವುದನ್ನು, ನೆರಳು ನೀಡುವುದನ್ನು ಕಲಿಸುವ ಮರ, ಬದುಕು ಶಾಶ್ವತವಲ್ಲ ಎಂದು ತಿಳಿಸಲು ಉದುರುವ ಹಣ್ಣೆಲೆಗಳು, ತನ್ನೊಡಲಲ್ಲಿ ಮಹಾವೃಕ್ಷವಾಗುವ ತಾಕತ್ತಿಟ್ಟುಕೊಂಡ ಪುಟ್ಟ ಬೀಜ, ತಾನು ಉರಿದು ಬೆಳಕು ನೀಡುವ ದೀಪ, ಉಳಿ ಪೆಟ್ಟು ತಿಂದರೇ ಶಿಲೆಯಾಗುವೆ ಎಂದು ಕಲಿಸುವ ಪ್ರತಿಮೆ, ಹೀಗೆ ಕಲಿಯುವ ಮನಸಿದ್ದರೆ ಪ್ರಕೃತಿಯ ಪ್ರತಿಯೊಂದೂ ಪಾಠಗಳೇ. ಹೀಗೆ ಗುರು ಸಾರ್ವತ್ರಿಕ ಶಕ್ತಿ ಈ ಶಕ್ತಿಯನ್ನು ಬಣ್ಣಿಸಲಾದೀತೆ ಪದಗಳಲಿ…? ಈ ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ನನ್ನ ನೆಚ್ಚಿನ ಗುರು ಶಾಂತಕುಮಾರ ಸಜ್ಜನ ಅವರನ್ನು ನೆನೆಯಲೇಬೇಕು. ಅವರಿಂದಲೇ ಈ ಜೀವ ಶಿಸ್ತು, ಸಮಯಪಾಲನೆ, ಸತ್ಯಗಳನ್ನು ಕಲಿತದ್ದು. ಅವರು ಹೆಸರಿಗೆ ತಕ್ಕಂತೆ ಸಜ್ಜನರೇ ಆಗಿದ್ದರು. ಸರಕಾರ ಕೊಡಲು ತೀರ್ಮಾನಿಸಿದ ರಾಜ್ಯ ಪ್ರಶಸ್ತಿಯನ್ನು ನವಿರಾಗಿ ನಿರಾಕರಿಸಿದ ಅಪರೂಪದ ವ್ಯಕ್ತಿ ಅವರು. ಕಳೆದ ವರ್ಷದ ಕರೋನ ಸಂದರ್ಭದಲ್ಲಿ ಶಿವಾಧೀನರಾದರೂ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಅವರೆಂದೂ ಜೀವಂತ, ಅನುಕರಣೀಯರು. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


Leave a Reply

Back To Top