ಕಾವ್ಯಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ತನಗ

೧
ತಾಜಮಹಲ ಮುಂದೆ
ನಗುತ ಛಾಯಾಚಿತ್ರ
ಮನೆಗೆ ಬಂದ ಮೇಲೆ
ನಿತ್ಯವೂ ಕುರುಕ್ಷೇತ್ರ
೨
ಕವಿತೆ ಮೂಡುತಿವೆ
ನಿತ್ಯ ಕವಿ ಮನದಿ
ಮನೆಯಲ್ಲಿ ಏನಿಲ್ಲ
ಗೊಣಗುವ ಮಡದಿ
೩
ದಿನಪೂರ್ತಿ ಅವನ
ನೆನಪು ಕಾಡುತಿದೆ
ಎದುರು ಬಂದಾಗೇಕೋ
ಎದೆ ಅದುರುತಿದೆ
೪
ಕವಿತೆ ವಾಚಿಸಿದ
ಕವಿಯಾದ ನಿರಾಳ
ಕೇಳಿದ ಕಿವಿಗಳು
ಅರ್ಥೈಸಿದ್ದೇ ವಿರಳ
ಚೆನ್ನಾಗಿದೆ