“ಚಂದಿರ-ಸುಂದರಿ¡”

ಕಾವ್ಯ ಸಂಗಾತಿ

“ಚಂದಿರ-ಸುಂದರಿ”

ರೂಪ ಮಂಜುನಾಥ

ಬೆಳ್ಳಿ ದಿರಿಸು ತೊಟ್ಟ ಸುಂದರ ಚಂದಿರ,
ಸಂಜೆಯಲ್ಲಿ ಎಂದಿನಂತೆ ಹೊರಟ ವಿಹಾರ!
ಸುಂದರಿ ಒಬ್ಬಳು,ಕುಳಿತಿದ್ದಳು
ಏಕಾಂತದಲ್ಲಿ,
ತಂಪಾದ ತಂಗಾಳಿಗೆ ತನ್ನ ಮೈ ಚೆಲ್ಲಿ!

ಅಂದಗಾತಿಯ ಚಂದ,
ಕಂಡು ಬೆರಗಾದ ಚಂದಿರ,
ನೋಡುತಲಿ ಅಲ್ಲೆ ನಿಂತು
ಮರೆತನಲ್ಲ ವಿಹಾರ!
ಪೂರ್ಣಚಂದ್ರನ ನೋಡಿ, ಅದೇಕೋ
ನಾಚಿ ನೀರಾದಳು,
ತನ್ನ ನೋಡಿ ಎಂದು ಶಶಿಯು,ಹಾಗೇ
ಪುಳಕಗೊಂಡನು!

ಇನಿಯನ ದಾರಿ ಕಾದು
ಕುಳಿತಿದ್ದ ಸುಂದರಿ,
ಬಂದ ಹುಡುಗನ
ತಬ್ಬಿ, ಅವನೆದೆಗೆ
ಒರಗಿದಳು!
ಮೇಲೆ ಕೈಯ ತೋರುತ,
,”ನೀ,ಅವನಿಗಿಂತ ಸುಂದರ!”,ಉಲಿದಳು.
ಕನಸಿನಾ ಲೋಕದಲಿ,
ಲೋಕವನೇ ಮರೆತರು!

ನಲ್ಲನ ಕೈ ಹಿಡಿಯುತಲಿ,
ನಡೆದಳು ಚಂದ್ರನಿಂದ
ದೂರದೂರ!
ಪ್ರೇಮಗೀತೆ ಹಾಡುತಲಿ,
ಹೊರಟರು ವಿಹಾರ!
ಬೆಳಗುತಿದ್ದ ಚಂದಿರ,
ಹಾಗೆಯೇ,ಮಂಕಾದ,
ಪೆಚ್ಚಾಯಿತು ಮೋರೆ
,ಬಿರಬಿರನೆ ನಡೆದ,
ಮೋಡದ ಮರೆಯಾದ!


ರೂಪ ಮಂಜುನಾಥ

Leave a Reply

Back To Top