ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಕರ್ನಾಟಕದ ಮೊದಲ ಇಂಜಿನಿಯರ

ರಾಜೇಶ್ವರಿ ಚಟರ್ಜಿ (1922-2010

ಡಾ.ಸುರೇಖಾ ರಾಠೋಡ್.

     ರಾಜೇಶ್ವರಿಯವರು ಕರ್ನಾಟಕದ ಕನ್ನಡ ನೆಲದ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದಾರೆ. ಇವರು ಕರ್ನಾಟಕದ ನಂಜನಗೂಡಿನಲ್ಲಿ 24 ಜನೇವರಿ 1922ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಬಸವನ ಗುಡಿಯಲ್ಲಿ ತನ್ನ ಅಜ್ಜಿ ಸ್ಥಾಪಿಸಿದ ‘ವಿಶೇಷ ಇಂಗ್ಲೀಷ ಶಾಲೆಯಲ್ಲಿ’ ಪಡೆದರು. ನಂತರ ಸೆಂಟ್ರಲ್ ಕಾಲೇಜ್ ಆಫ್ ಬೆಂಗಳೂರನಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಅದೇ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿಯನ್ನು ಮುಗಿಸಿದರು. ಈ ಎರಡು ಪದವಿಯಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದರು. ಇವರು ಪ್ರಥಮ ರ್ಯಾಂಕ್ ಪಡೆದುದ್ದರಿಂದ ಮುಮ್ಮಡಿ ಕೃಷ್ಣರಾಜ್ ಒಡೆಯರ್ ಪ್ರಶಸ್ತಿ, ಎಮ್.ಟಿ ನಾರಾಯಣ ಐಯಂಗಾರ್ ಪ್ರಶಸ್ತಿ ಮತ್ತು ವಾಲ್ಟರ್ಸ್ ಮೆಮೊರಿಯಲ್ ಪ್ರಶಸ್ತಿಯನ್ನು ಪಡೆದರು.

 ರಾಜೇಶ್ವರಿಯವರು ಎಂಎಸ್ಸಿ ಮುಗಿಸಿದ ನಂತರ 1943ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಎಲೆಕ್ಟ್ರಿಕಲ್ ಟೆಕ್ನಾಲಜಿ ವಿಭಾಗದಲ್ಲಿ ಕ್ಷೇತ್ರ ಸಂವಹನ ಸಂಶೋಧಕರಾಗಿ ಸೇರಿಕೊಂಡರು. ಅದೇ ವೇಳೆಯಲ್ಲಿ ರಾಜೇಶ್ವರಿಯವರಿಗೆ ಭಾರತ ಸರ್ಕಾರವು ‘ಬ್ರೈಟ್ ಸ್ಟುಡೆಂಟ್’ ಎಂದು ಗುರಿತಿಸಿ, ವಿದೇಶದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಶಿಷ್ಯವೇತನವನ್ನು ನೀಡಿತು. ಹಾಗಾಗಿ ಇವರು ಉನ್ನತ ಶಿಕ್ಷಣ ಪಡೆಯಲು ಯುಎಸ್‍ಗೆ ಹೋಗಲು ನಿರ್ಧರಿಸಿದರು. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಿ ಶಿಕ್ಷಣ ಪಡೆಯುವುದು ಕಷ್ಟದ ಸ್ಥಿತಿಯಾಗಿತ್ತು. ಇವರು ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ ನಿರ್ಧಾರವು, ಅಂದಿನ ಬೇರೆ ಮಹಿಳೆಯರು ಕೂಡ ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಪ್ರೇರಣೆಯಾಯಿತು. ಇವರು ಮಿಚಿಗಂನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ದಾಖಲಾತಿಯನ್ನು ಪಡೆದು ಸ್ನಾತಕೋತ್ತರ ಪದವಿಯನ್ನು ಪಡೆದರು. ಇವರಿಗೆ ಭಾರತ ಸರ್ಕಾರವು ಶಿಷ್ಯವೇತನವನ್ನು ನೀಡಬೇಕಾದರೆ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ವಾಷಿಂಗ್ಟನ್ ಡಿ.ಸಿಯಲ್ಲಿ ರಾಷ್ಟ್ರೀಯ ಬ್ಯೂರೋ ಆಫ್ ಸ್ಟ್ಯಾಂಡಡ್ಸನಲ್ಲಿ ರೇಡಿಯೋ ಆವರ್ತನ ಅಳತೆಗಳ (Radio Frequency measurements) ವಿಭಾಗದಲ್ಲಿ ಎಂಟು ತಿಂಗಳ ಪ್ರಾಯೋಗಿಕ ತರಬೇತಿಯನ್ನು ಪಡೆದರು. ನಂತರ ಮರಳಿ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಾಧ್ಯಾಪಕ ಗೌಲ್ಡ್‍ಡೌ ಅವರ ಮಾರ್ಗದರ್ಶನದಲ್ಲಿ ಪಿಹೆಚ್‍ಡಿ ಪದವಿಯನ್ನು ಪಡೆದರು. 

 1953 ರಲ್ಲಿ ರಾಜೇಶ್ವರಿಯವರು ತಮ್ಮ ಪಿಹೆಚ್‍ಡಿ ಪದವಿಯನ್ನು ಪಡೆದುಕೊಂಡು ಭಾರತಕ್ಕೆ ಮರಳಿ ‘ಭಾರತೀಯ ವಿಜ್ಞಾನ ಸಂಸ್ಥೆ’ (Indian Institute of Science)ನಲ್ಲಿ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಇಲಾಖೆಯಲ್ಲಿ ಬೋಧನೆಗೆ ಸೇರಿಕೊಂಡರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಶರ್ ಕುಮಾರ್ ಚಟರ್ಜಿಯವರನ್ನು ವಿವಾಹವಾದರು. ದಂಪತಿಗಳಿಬ್ಬರು ಸೇರಿಕೊಂಡು ಮೈಕ್ರೋವೇವ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆಯನ್ನು ಪ್ರಾರಂಭಿಸುವರು. ಈ ವಿಷಯದ ಸಂಶೋಧನೆಯು ಭಾರತದಲ್ಲಿ ಮೊದಲನೆಯದಾಗಿರುತ್ತದೆ. ನಂತರ ಇವರು ಮೈಕ್ರೋವೇವ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿದರು. ಇದೇ ಸಮಯದಲ್ಲಿ ರಾಜೇಶ್ವರಿಯವರು ಐಐಎಸ್‍ಸಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವುದರ ಜೊತೆಗೆ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಇವರು ಎಲೆಕ್ಟ್ರೋಮ್ಯಾಗ್ನೇಟಿಕ್ ಸಿದ್ಧಾಂತ್, ಎಲೆಕ್ಟ್ರಾನ್ ಟ್ಯೂಬ್ ಸಕ್ರ್ಯೂಟ್ ಮತ್ತು ಮೈಕ್ರೋವೇವ್ ಟೆಕ್ನಾಲಾಜಿ ವಿಷಯವನ್ನು ಬೋಧಿಸುತ್ತಿದ್ದರು. ಹಾಗೆಯೇ ಸಂಶೋಧನೆಯಲ್ಲಿ ತಮ್ಮನ್ನು ತಾವು ಸಕ್ರಿಯಾಗಿ ತೊಡಗಿಸಿಕೊಳ್ಳುತ್ತಿದ್ದರು. ಇವರು ತಮ್ಮ ಬೋಧನಾ ಅವಧಿಯಲ್ಲಿ ಸುಮಾರು 20 ಪಿಹೆಚ್‍ಡಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಸುಮಾರು 100 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು.  ಮೈಕ್ರೋವೇವ್ ಎಂಜಿನಿಯರಿಂಗ್ ಮತ್ತು ಅಂಟೆನಾಗಳಿಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಬರೆದಿರುವರು.

ರಾಜೇಶ್ವರಿ ಅವರು ಬರೆದ ಪುಸ್ತಕಗಳು: 1. ಎ ಥೌಸಂಡ್ ಸ್ಟ್ರಿಮ್‍ಸ್: ಎ ಪರಸನಲ್ ಹಿಸ್ಟರಿ, 2005, (A Thousand Streams: A Personal History, 2005)

2. ಅಡ್ವಾನ್ಸ್‍ಡ್ ಮೈಕ್ರೋವೇವ್ ಇಂಜಿನಿಯರಿಂಗ್ 1986, (Advanced microwave engineering,1986)

3. ವಸುದೈವ ಕುಟುಂಬಕಂ: ದಿ ಹೋಲ್ ವಲ್ರ್ಡ್ ಈಜ್ ಬಟ್ ಓನ್ ಪ್ಯಾಮಿಲಿ: ರಿಯಲ್ ಸ್ಟೋರೀಸ್ ಆಫ್ ಸಮ್ ವುಮೇನ್ ಆಂಡ್ ಮೇನ್ ಆಫ್ ಇಂಡಿಯಾ, 2005 (Vasudhaiva Kutumbakam: The Whole World Is But One Family: Real Stories of Some Women And Men of India, 2005)

4. ಆಂಟೆನಾಸ್ ಫಾರ್ ಇನ್ಫಾರ್ಮೇಶನ್ ಸೂಪರ್ ಸ್ಕೈವೇಸ್: ಆನ್ ಎಕ್ಪ್ಷೊಸಿಶನ್ ಆನ್ ಇನ್‍ಡೋರ್ ಆಂಡ್ ಔಟ್‍ಡೋರ್ ವೈರ್ಲೆಸ್ ಆಂಟೆನಾಸ್ 2003, (Antennas for Information Super Skyways: An Exposition on Outdoor and Indoor Wireless Antennas, 2003)

5. ಡೈಎಲೆಕ್ಟ್ರಿಕ್ ಆಂಡ್ ಡೈಎಲೆಕ್ಟ್ರಿಕ್-ಲೋಡ್ ಆಂಟೆನ್ಸಾ, 1985, (Dielectric and dielectric-loaded antennas,1985)

6. ಎಲಿಮೆಂಟ್ಸ್ ಆಫ್ ಮೈಕ್ರೊವೇವ್ ಇಂಜಿನಿಯರಿಂಗ್, 1986, (Elements of microwave engineering, 1986)

7. ಆಂಟೆನಾ ಥೆರಿ ಆಂಡ್ ಪ್ರ್ಯಾಕ್ಟಿಸ್ 1986 (Antenna theory and practice, 1986).

      ರಾಜೇಶ್ವರಿಯವರು ಮೈಕ್ರೊವೇವ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ.  ಅವರ ಕೆಲಸಗಳು ಅವರಿಗೆ ಹಲವು ಪ್ರಶಸ್ತಿ ಮತ್ತು ಗೌರವಗಳು ಲಭಿಸುವಂತೆ ಮಾಡಿವೆ. ಅವರಿಗೆ ಅತ್ಯುತ್ತಮ ಪೇಪರ್ ಮೌಂಟ್ಟ್ಯಾಟನ್ ಪ್ರಶಸ್ತಿಯನ್ನು ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆಂಡ್ ರೇಡಿಯೋ ಇಂಜಿನಿಯರಿಂಗ್(ಯುಕೆ)ನಿಂದ ನೀಡಿ ಗೌರವಿಸಿತು. ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆಯು ಉತ್ತಮ ಸಂಶೋಧನಾ ಪೇಪರ್ ಎಂದು ಜೆ. ಸಿ. ಬೋಸ್ ಮೇಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಿತು.


ಡಾ.ಸುರೇಖಾರಾಠೋಡ್

ಡಾ.ಸುರೇಖಾರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top