ಕಥಾ ಸಂಗಾತಿ
ಮತ್ತಷ್ಟು ನ್ಯಾನೋ ಕಥೆಗಳು
ರಾಘವೇಂದ್ರ ಮಂಗಳೂರು
ಅವನು…ನಿನ್ನವನೇ
“ಆತ ಇಡೀ ರಾತ್ರಿಯೆಲ್ಲಾ
ನಿನ್ನೊಂದಿಗೆ ಫೋನ್ ನಲ್ಲಿ
ಮಾತಾಡ್ತಾ ಇದ್ದಾನೆ..
ನೀನೆಂದರೇನೇ ಇಷ್ಟ..”
“ಇಲ್ಲ.. ಇಲ್ಲ.. ನೀನೆಂದರೇನೇ ಇಷ್ಟ.
ರಾತ್ರಿಯೆಲ್ಲ ಮಾತನಾಡಿದ್ದು ನಿಜ
ಆದರೆ.. ಮಾತನಾಡಿದ್ದು
ನಿನ್ನ ಬಗ್ಗೆ ಮಾತ್ರ…”
***
ಫ್ಯಾಮಿಲಿ
“ಯಾರು ಬೇಕೋ ನೀನೇ
ತೀರ್ಮಾನ ಮಾಡು..
ನಾನಾ? ನಿನ್ನ ಕುಟುಂಬನಾ?..
ಬುಸುಗುಡುತ್ತಾ ಚೀರಿದಳು ಆಕೆ..
“ನನ್ನ ಕುಟುಂಬದಲ್ಲಿ ನೀನು…” ಎಂದು
ತಣ್ಣನೆಯ ಸ್ವರದಲ್ಲಿ ನುಡಿದ ಆತ!
***
ಬದಲಾಗದ ಗಂಡಸು
‘ನನ್ನ ದೃಷ್ಟಿಯಲ್ಲಿ ಮಗ
ಅಥವಾ ಮಗಳು ಇಬ್ಬರೂ
ಸರಿ ಸಮಾನ…’ ಎಂದು ಆತ
ತನ್ನ ಸಂಪಾದನೆಯನ್ನು
ಸಮಭಾಗ ವಿಭಜಿಸಿದ..
ಮೊದಲ ಅರ್ಧ ಮಗನ ಓದಿಗಾಗಿ..
ಉಳಿದರ್ಧ ಮಗಳ ಮದುವೆಗಾಗಿ!
***
ರೊಟ್ಟಿ
‘ನೀನು ನನ್ನ ತಾಯಿಯೇ ಅಲ್ಲ..’
ಎಂದು ಒಂದು ರೊಟ್ಟಿ ತುಂಡು
ಸಹ ಕೊಡದೆ ಮನೆಯಿಂದ
ಹೊರಹಾಕಿದ ಮಗ..
ಅದೇ ಮನೆಯ ಬೀದಿ
ಬದಿಯಲ್ಲಿ ಜೋಳದ ರೊಟ್ಟಿ
ತಟ್ಟಿ ಮಾರುತ್ತ ಹಲವು ಮಕ್ಕಳ
ಹಸಿವನ್ನು ನೀಗಿಸಿದಳು
ಆ ಮಹಾ ತಾಯಿ!
***
ಚಪ್ಪಲಿ
‘ಚಪ್ಪಲಿಯನ್ನು ಸ್ಟ್ಯಾಂಡ್ ನಲ್ಲೇ
ಬಿಟ್ಟು ಹೋಗಿ ಇಲ್ಲದಿದ್ದರೆ…’
ಸೆಕ್ಯುರಿಟಿ ಗಾರ್ಡ್ ಎಚ್ಚರಿಕೆಯನ್ನು
ನಾನು ಕೇಳಿಸಿಕೊಳ್ಳಲೇ ಇಲ್ಲ..
ದೈವ ದರ್ಶನ ಮಾಡಿ ಹೊರ
ಬಂದು ನೋಡುತ್ತೇನೆ
ನನ್ನ ಚಪ್ಪಲಿಗಳೇ ಇಲ್ಲ…
ಮನಸಿಗೆ ಸಂತೋಷವೆನಿಸಿತು..
ಏಕೆಂದರೆ ಈ ಸುರು ಸುಡು
ಬಿಸಿನಲ್ಲಿ ನನ್ನ ಚಪ್ಪಲಿಗಳು
ಯಾರೋ ಒಬ್ಬರ ಪಾದಗಳನ್ನು
ಕಾಪಾಡುತ್ತಿವೆನ್ನುವ ಸಂತೃಪ್ತಿಯಿಂದ!
***
ದೋಸ್ತ್
‘ಗೆಳೆಯನ ಜೊತೆ ಸೇರಿ ಹೊಸತಾಗಿ
ಬ್ಯುಸಿನೆಸ್ ಸ್ಟಾರ್ಟ್ ಮಾಡ್ತಿಯಾ?
ಅವನು ನಂಬಿಗಸ್ತನಾ..
ನಿನಗೆ ಮೋಸ
ಮಾಡೋದಿಲ್ಲ ತಾನೇ…’
‘ಚಿಕ್ಕವನಿದ್ದಾಗ ಬ್ರೇಕ್ ಇಲ್ಲದ
ಸ್ಯಕಲ್ಲಿನ ಮೇಲೆ ಕೂಡ
ನನ್ನನ್ನು ಸುರಕ್ಷಿತವಾಗಿ
ಸ್ಕೂಲಿಗೆ ಕರೆದುಕೊಂಡು
ಹೋಗುತ್ತಿದ್ದ ಆ ಗೆಳೆಯ…
ನ್ಯಾನೋ ಕಥೆಗಳು ಸೊಗಸಾಗಿವೆ.
ಅಭಿನಂದನೆಗಳು
ಧನ್ಯವಾದಗಳು
ನಿಜ ಜೀವನದ ನಿಜ ಕತೆಗಳು.
ತುಂಬಾ ಅದ್ಭುತವಾಗಿದವೇ.
ಧನ್ಯವಾದಗಳು..
ನಿಜ ಜೀವನದ ನೈಜ ಕತೆಗಳು.
ತುಂಬಾ ಅದ್ಭುತವಾಗಿದವೇ.
ಧನ್ಯವಾದಗಳು..
ಧನ್ಯವಾದಗಳು ಮೆಚ್ಚುಗೆಗೆ
ಎಲ್ಲಾ ಕತೆಗಳು ಬದುಕಿಗೆ ಮಹದರ್ಥ ನೀಡಿವೆ.
ಧನ್ಯವಾದಗಳು ತಮ್ಮ ಅನಿಸಿಕೆಗೆ
Nice stories Raganna
ಧನ್ಯವಾದಗಳು
ಎಲ್ಲಾ ಕಥೆಗಳು ಚೆನ್ನಾಗಿವೆ. ಅಭಿನಂದನೆಗಳು ರಾಘವೇಂದ್ರ ಮಂಗಳೂರು
ಧನ್ಯವಾದಗಳು
ವಿಭಿನ್ನ ಭಾವನೆಗಳ ಮೇಳ ಈ ಕಣಕಥೆಗಳ ಗುಚ್ಛ. ರೊಟ್ಟಿಯಲ್ಲಿ ಆತ್ಮವಿಶ್ವಾಸ, ದೋಸ್ತನಲ್ಲಿ ವಿಶ್ವಾಸ, ಚಪ್ಪಲಿಯಲ್ಲಿ ಸಮಾಧಾನ, ಬದಲಾಗದ ಗಂಡಸಿನಲ್ಲಿ ಜವಾಬ್ದಾರಿ, ಹೀಗೆ , ಕಣ್ಣಿಗೆ ಕಾಣದಿದ್ದರೂ ಮುದನೀಡುವ ಸುಗಂಧದಂತೆ ಮಂಗಳೂರು ರಾಘವೇಂದ್ರರ ಈ ಕಥಾಮಾಲೆ. ಅಭಿನಂದನೆಗಳು.
ಧನ್ಯವಾದಗಳು
Nimma nano kathegalu sogasagive Sir