ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನು ಬರುವವರೆಗೂ

ಅನಸೂಯ ಜಹಗೀರದಾರ

Metal Figure Statue Red Heart Lover Sculpture Canvas Painting Romantic  Abstract Poster Print Wall Art Pictures Modern Home Decor|Painting &  Calligraphy| - AliExpress

ನಾನು ನಿನ್ನನು
ಸೇರುವವರೆಗೂ

ಕಾಪಿಟ್ಟಕೋ
ಇದಿಷ್ಟನೂ..

ನೀನೇ ವರ್ಣಿಸುವ
ನಾನೆಂಬ ಈ
ಪ್ರಕೃತಿಯ ಅಚ್ಚರಿಯನ್ನು
ಒನಪು ವಯ್ಯಾರವನ್ನು

ಆಗಾಗಿನ ಖತಿಯನ್ನು
ಕುಶಾಗ್ರ ಮತಿಯನ್ನು
ಸಂತೈಸುವ ಗತಿಯನ್ನು

ನಿನಗಾಗಿ ತುಡಿವ ಹೃದಯವನ್ನು
ಸಂಗಾತಕ್ಕಾಗಿ ಹಂಬಲಿಪ ಆತ್ಮವನ್ನು
ಸದಾ ನೆನೆಕೆಯ ಜೀವವನ್ನು
ಅನುಕರಿಸುವ ನಡೆಯನ್ನು

ಒಲವನ್ನು ಬಲವನ್ನು
ಸೆಲೆಯನ್ನು ಬಲೆಯನ್ನು
ಕರೆಯನ್ನು ಮೊರೆಯನ್ನು

ಜತನವಾಗಿಟ್ಟುಕೋ
ಇದಿಷ್ಟನೂ…!!

ನಾನು ಬರುವವರೆಗೂ..
ನಾ ನಿನ್ನಲ್ಲಿ
ನೆಲೆಯಾಗುವವರೆಗೂ..

ಅಲ್ಲೊಂದು ದೀಪ ಉರಿಯುತ್ತಿರಲಿ
ನನ್ನಂತೆ…!!


ಅನಸೂಯ ಜಹಗೀರದಾರ

About The Author

2 thoughts on “ನಾನು ಬರುವವರೆಗೂ”

  1. Raghavendra Mangalore

    ಕವಿತೆ ಚೆನ್ನಾಗಿದೆ.ಅಭಿನಂದನೆಗಳು ಮೇಡಂ.

Leave a Reply

You cannot copy content of this page

Scroll to Top