ಕಾವ್ಯ ಸಂಗಾತಿ
ಗಜಲ್
ಆಸೀಫಾ

ಗಾಢ ನಿದ್ರೆಯಲಿ ಬಣ್ಣ ಬಣ್ಣದ ಕನಸಾಗಿ ಕಾಡುತ್ತಾನೆ
ಹಗಲಲ್ಲಿ ಮಂಜಿನಂತೆ ಮೆಲ್ಲಮೆಲ್ಲನೆ ಮಾಯವಾಗುತ್ತಾನೆ
ಮೌನವಾಗೆನ್ನ ಮನಸೊಂದಿಗೆ ನಾನೇ ಮಾತನಾಡುತ್ತೇನೆ
ಏಕಾಂತದಲ್ಲಿ ದಟ್ಟನೆನಪುಗಳಾಗಿ ನನ್ನನ್ನು ಆವರಿಸುತ್ತಾನೆ
ಅವನೋ ಅಲೆಮಾರಿ ಇರಬೇಕು ಎಲ್ಲೆಲ್ಲೂ ಇರುತ್ತಾನೆ
ನನ್ನಲ್ಲೇ ಮನೆಮಾಡಿ ಕೊನೆಗೆ ನನ್ನನ್ನೇ ಕೊಲ್ಲುತ್ತಾನೆ
ಕಣ್ಸನ್ನೆ ಮಾಡಲಿಲ್ಲ ಬಾಹುಗಳಲಿ ಬಂಧಿಸಿ ಬಿಗಿದಪ್ಪಲಿಲ್ಲ
ಇರುಳಲ್ಲಿ ಇಂಚಿಂಚು ಮುದ್ದಿಸಿ ಪ್ರೀತಿಸಿ ಮತ್ತೇರಿಸುತ್ತಾನೆ
ಮರುಳಾಗದಿರಲು ಮನಕೆ ಬಿಗಿಯಾಗಿ ಮುಷ್ಟಿ ಕಟ್ಟುತ್ತೇನೆ
ಗೊತ್ತಿಲ್ಲದಂತೇ ಉಸಿರಾಗಿ ಹೃದಯದ ಬಡಿತವಾಗುತ್ತಾನೆ
ಅನಾಯಧೇಯ ಅವ ಪರಿಚಿತನಂತೂ ಅಲ್ಲ ಆದರೂ ಪ್ರೇಮಿ
ಕಣ್ಣಲ್ಲಿ ಸುಂದರ ಬಿಂಬದ ಸರದಾರನಾಗಿ ಹರಿದಾಡುತ್ತಾನೆ
ಒಲವನ್ನು ಮುತ್ತುಗಳಲಿ ಪೋಣಿಸಿ ಓಲೆಬರೆದು ಓಲೈಸಿದ
ಆಸೀ ನೀ ನನ್ನ ಸುಂದರೀ ಎಂದು ಮತ್ತೆ ಮತ್ತೆ ಅರಹುತ್ತಾನೆ

Super madam
ಧನ್ಯವಾದಗಳು ಸರ್
Nice
ಚೆನ್ನಾಗಿದೆ.
ಅನಾಮಧೇಯ…
ಅರುಹುತ್ತಾನೆ
ಎಂದು ಆಗಬೇಕು.
ಗಮನಿಸಿ.
ಹೂಂ ಸರಿ ಸಾರ್ ಧನ್ಯವಾದಗಳು