ಜುಗಲ್ ಬಂದಿ ಗಜಲುಗಳ ಬಗ್ಗೆ
ಮಂಡಲಗಿರಿ ಪ್ರಸನ್ನ
ಜುಗಲ್ ಬಂದಿ ಗಜಲ್ ಕುರಿತು ನಾನು ಓದಿ ತಿಳಿದುಕೊಂಡಂತೆ:
೧) ಹಿಂದುಸ್ಥಾನಿ ಸಂಗೀತದಲ್ಲಿ ಇರುವ ಪದ್ಧತಿಯಂತೆ ಇಬ್ಬರು ಗಾಯಕರ / ವಾದ್ಯಗಳ ಜೊತೆಗೂಡುವಿಕೆಯ ಗಾಯನದಂತೆ ಇದು ಗಜಲ್ ಕಾವ್ಯದ / ಗಜಲಕಾರರ ಜುಗಲ್ ಬಂದಿ
೨) ಜುಗಲ್ ಬಂದಿ ಗಜಲ್ ಗಳು ರದೀಫ್ / ಕಾಫೀಯ ಸಹಿತ ಗಜಲ್ ಗಳಾಗಿರುತ್ತವೆ
೩) ಒಂದೇ ರದೀಫ್ ಅನ್ನು ಇಬ್ಬರು ಜುಗಲ್ ಬಂದಿ ಗಜಲಕಾರರು, ಅದನ್ನೇ ಬಳಸಬೇಕು.
೪) ಆದರೆ ಕಾಫಿಯಗಳು ಮತ್ತು ಗಜಲ್ ರಚನೆ ಬೇರೆ ಬೇರೆ ಆಗಿರಬೇಕು, ಕಾಫಿಯಾಗಳ ರವೀಶ್ ಒಂದೆ ಆಗಿರಬೇಕು.
೫) ಗಜಲ್ ನ ಭಾವ ಒಂದೇ ಆಗಿರಬೇಕು
೬) ಇಬ್ಬರೂ ಗಜಲ್ ಕಾರರು ಶೇರ್ ಗಳು ಸಮನಾಗಿರಬೇಕು. ಅಂದರೆ ಒಬ್ಬರದು ೫ ಶೇರ್ ಇದ್ದರೆ ಇನ್ನೊಬ್ಬರದು ಅಷ್ಟೇ ಶೇರ್ ಇರಬೇಕು
೭) ಒಂದು ಗಜಲ್ ನಲ್ಲಿ ಬಳಸಿದ ರದೀಫ್ ಮತ್ತೊಂದು ಗಜಲ್ ನಲ್ಲಿ ಪುನರಾವರ್ತನೆ ಆಗಬಾರದು
೮) ರದೀಫ್ ಜೊತೆ ಬೇಕಿದ್ದಲ್ಲಿ ಇನ್ನೊಂದು ಶಬ್ದ ಸೇರಿಸಿ ಬಳಸಬಹುದು. ಆದರೆ ರದೀಫನ ಕೊನೆ ಶಬ್ದ ಅದೇ ಆಗಿರಬೇಕು
೯) ಜುಗಲ್ ಬಂದಿ ಗಜಲ್ ಎಂದರೆ ರದೀಫ ಸಹಿತ ಗಜಲ್ ಗಳೇ ಆಗಿರುತ್ತವೆ
೧೦) ಕಾಫಿಯಾನಾ ಗಜಲ್ ಜುಗಲ್ ಬಂದಿ ಮಾಡಬಹುದು. ಆದರೆ ಅದು ಸ್ವಾರಸ್ಯಕರ ಆಗಿರುವುದಿಲ್ಲ.
ಇದಿಷ್ಟು ಅಂಶಗಳನ್ನು ನಾನು ಅಲ್ಲಲ್ಲಿ ಓದಿ ಅರ್ಥೈಸಿಕೊಂಡಿರುವುದು. ಮತ್ತೇನಾದರೂ ಬೇಕಿದ್ದಲ್ಲಿ ಸೇರಿಸಬಹುದು.
– ಗಿರಿ