ಕಾವ್ಯ ಸಂಗಾತಿ
ನಮ್ಮನೆ ಕಿನ್ನರಿ
ಅರುಣಾ ನರೇಂದ್ರ
ಚಂದದಿ ನಗುವಾ ಚಿನ್ನಿ ಅಂದರೆ
ಖುಷಿಯಲಿ ನಗ್ತಾಳೆ
ಸ್ಮೈಲಿ ಅಂತ ತನ್ನ ಹೆಸರೆಂದು
ಹೇಳ್ಕೊಂಡ ಬೀಗ್ತಾಳೆ
ಆಟದ ಗೊಂಬೆಯ ಮಾತಾಡಿಸುತಾ
ಜೀವ ತುಂಬ್ತಾಳೆ
ಅಮ್ಮನ ಕರೆಗೆ ಓಗೊಡುತಾ
ಮೆಚ್ಚುಗೆ ಪಡಿತಾಳೆ
ಸೈಕಲ್ ಮೇಲೆ ಕೂರಿಸಿಕೊಂಡು
ಆಟ ಆಡಿಸ್ತಾಳೆ
ಶಾಲೆಯ ಮಿಸ್ ತಾನೆ ಆಗಿ
A B C ಬರೆಸ್ತಾಳೆ
ಮಾತನು ಕೇಳದ ಪಾಪು ಎಂದು
ಪಟಪಟ ಹೊಡಿತಾಳೆ
ನೋವಾಯ್ತಾ ಚಿನ್ನ ಎಂದು
ಮತ್ತೆ ರಮಿಸ್ತಾಳೆ
ಕೆಟ್ಟು ಹೋಗಿರುವ ಫೋನ್ ಹಿಡ್ಕೊಂಡು
ಮಾಮಗೆ ಮಾತಾಡ್ತಾಳೆ
ಚಾಕ್ಲೇಟ್ ಕೊಡಿಸದ ಅಣ್ಣನ ಬಗ್ಗೆ
ಅಳ್ತಾ ಚಾಡಿ ಹೇಳ್ತಾಳೆ
ನಮ್ಮನೆ ಮಗಳು ಮುತ್ತಿನ ಹರಳು
ಕಿನ್ನರಿಯಂತೆ ಕಾಣ್ತಾಳೆ
ದೇವರ ದಯದಿ ಎತ್ತರ ಬೆಳೆದು
ಮನೆ-ಮನಗಳನು ಬೆಳಗ್ತಾಳೆ