ಕಾವ್ಯ ಸಂಗಾತಿ
ಅನ್ನವೇ ದೈವ
ಜಯಲಕ್ಷ್ಮಿ ಎಂ ಬಿ


ಹಸಿದವಗೆ ಅನ್ನವನು ಇಕ್ಕಿದೆಡೆ ತೃಪ್ತನವ
ಹಸಿದು ಬೇಡಿದೆಡೆ ಬಡಿಸದಿರಬೇಡ
ಹಸಿದವನು ತುಂಬಿದೆಡೆ ಹರಸುವನು ಎಂದೆಂದು
ಹುಸಿಯನೆಂದು ನುಡಿಯನು ತಿಳಿದು ಬದುಕು
ದಾನದಾನಗಳಲ್ಲಿ ಅನ್ನದಾನವೆ ಮೇಲು
ದಾನವನು ನೀಡಿದೆಡೆ ಪಾಪವಿರದು
ಪಾನವನು ನೀಡುತಲಿ ಊಟವನು ಬಡಿಸಿದೆಡೆ
ದಾನಿಯನು ಮರೆಯನವ
ಅರಿತುನೋಡು
ಮಾನವನ ಆಸೆಯನು ಪೂರೈಸಿ ಫಲವಿಲ್ಲ
ದಾನವದು ದೊರೆತಷ್ಟು ಬೇಡುತಿಹನು
ದಾನದಲಿ ಅನ್ನವದು ಮತ್ತಷ್ಟು ದೊರೆತಾಗ
ಮಾನವನು ಹೊಂದುವನು ತೃಪ್ತಿಯನ್ನು
ಅನ್ನವನು ನೋಡುತಿರೆ ಭಗವಂತ ಕಾಣುವನು
ತಿನ್ನುತಲಿ ನೆನೆಯುತಿರು ದಾತನನ್ನು
ಅನ್ನದಾ ಅಗುಳಿನಲಿ ಶ್ರಮವಿಹುದು ರೈತನದು
ಅನ್ನವೇ ಸರ್ವಸ್ವ ಬಸವೇಶ್ವರ
ಜಯಲಕ್ಷ್ಮಿ ಎಂ ಬಿ
