ಕಾವ್ಯ ಸಂಗಾತಿ
ನಿಜಾಲ್ಲಮ
ಶ್ರೀನಿವಾಸ ಜಾಲವಾದಿ
ರಾಗಾಲಾಪನಯಲಿ ಇರುವ ಕೃಷ್ಣ
ಅರಳಿಗಿಡದ ನೆರಳು ಬೆಳಕಿನ ಕಿರಣ
ಗೀತಾಂಜಲಿಯ ಸಾಲುಗಳಲಿರುವ
ಎದೆಗಡಲ ಮುತ್ತುಗಳ ಚಕ್ರವರ್ತಿ!
ಕೃಷ್ಣರೆಂದರೇ ಚಂದನೆಯ ಕಾವ್ಯದರಸು
ಅಂತಃಕರುಣೆಯೇ ಇವರ ಕಾವ್ಯನಾಮ
ಸುರಗಿರಿಯ ಕವಿರತ್ನ ಈ ಸಿರಿ ದೊರೆ ಮಾನವತೆಯ ನಿಜದ ಪರುಷಮಣಿ!
ಹಾಲು ಬೆಳದಿಂಗಳಿನಂತಹ ಮನದ
ನಗುಮೊಗದ ಒಡೆಯ ಮೌನವಾಚಾಳಿ
ಭೃಂಗದ ಬೆನ್ನೇರಿದ ಕಾವ್ಯ ಗಾರುಡಿಗ
ಸುರಗಿರಿಯ ಹೊನ್ನ ಕಳಸ ಕೃಷ್ಣಬೇಂದ್ರೆ!
ದಶಕಗಳುರುರುಳಿದರೂ ನೀವು ನೀವೇ
ನಿಮ್ಮ ಸ್ಥಾನದೀ ಯಾರೂ ಬರಲಾರರು
ಒಲುಮೆ ನುಡಿಗೆ ಪರ್ಯಾಯವೆಲ್ಲಿದೆ?
ಅದೇ ನುಡಿಯ ಗೋಕುಲ ಕೃಷ್ಣನಿಲ್ಲಿ!
ಕನ್ನಡಿಯೊಳಗೆಷ್ಟು ಕಂಡೀತು ಪ್ರತಿಭಾ ಶಿಖರ
ಕೊಡದಾಗ ಹಿಡೀದಿತೆಷ್ಟು ಕಡಲ ಜಲ
ಕೃಷ್ಣರ ಜ್ಞಾನದ ಹರವು ದಕ್ಕುವಂತದ್ದಲ್ಲ
ಬಯಲನೇ ಬಿತ್ತಿ ಬೆಳೆದ ನಿಜಾಲ್ಲಮ!
ಸಾಂದ್ರಗೊಂಡ ಕವಿತೆ, ಅದ್ಬುತವಾದ ಪ್ರತಿಮೆಗಳು, ಕೊನೆಯ ಸಾಲು ಅದ್ಭುತ!
ಅಭಿನಂದನೆಗಳು ಸರ್
ಡಿ ಎಂ ನದಾಫ್ ಅಫಜಲಪುರ