ಸಂಕೊಲೆ ಕಳಚಿ

ಕಾವ್ಯ ಸಂಗಾತಿ

ಸಂಕೊಲೆ ಕಳಚಿ

ಶಾಲಿನಿ ಕೆಮ್ಮಣ್ಣು

ಸಂಧಿ ಸಾಧ್ಯವಿರದ ಸಂಜೆಯಲಿ
ಮುಗುಳ್ನಗುತ ನೀರ ಸಾಗರವ ಚುಂಬಿಸುವ
ಸೂರ್ಯನ ನೆತ್ತರ ಓಕುಳಿಯ ಕಾಣುತ ಕಲ್ಲೆಸೆದರೆ ಕಡಲಲೆಗಳಿಗೆ ಕಚುಕುಲಿಯಾಗುವುದೇ?

ಕುದುರೆ ಓಟದ ಬದುಕಿನಲಿ
ಹಿಡಿತ ಮೀರಿ ಜಾರುತಿದೆ ಯೌವನ
ಇನ್ನೆಲ್ಲಿಯ ತೀರದ ಮೋಹ
ಮುಗಿಲ ಮಲ್ಲೆಯ ಚುಂಬನ ದ ದಾಹ

ಈ ನಡುವೆ ಯಾವ ಪ್ರೇಮ ಕಾಶ್ಮೀರದ ನಿರೀಕ್ಷೆ
ಏನು ಸಮ್ಮತಿ ನೀಡಲಿ ಬತ್ತಿದೆ ಆಕಾಂಕ್ಷೆ
ಕವಿದ ಕಾರ್ಮೋಡಗಳಲ್ಲಿ ಕಾಣೆಯಾಗಿ
ಜ್ವಲನವ ಮರೆತಿದೆ ನಕ್ಷತ್ರ ಪುಂಜ

ಒಡಲ ಮಾರುತದ ವರಸೆಗೆ
ಕಾನನದೆಡೆ ಸಾಗಿದೆ ಹರಡಿದ ಹೂಗಂಧ
ಸಂಗಮದ ಜೋಕಾಲಿ ಸಂಕೋಲೆ ಕಳಚಿ
ಅಲೆಯುತ ಅರಸುತಿದೆ ಸಂಧಿಯ ಬಯಸಿ
ಅನಾಥವಾಗಿ ನಿರ್ಜನವಾಗಿ ಜೋತು ಖಾಲಿ
———————————–

One thought on “ಸಂಕೊಲೆ ಕಳಚಿ

  1. ಧ್ವನಿಪೂರ್ಣ ಕವಿತೆ. ಆದ್ರವಾಗಿ ತಟ್ಟುತ್ತದೆ..

Leave a Reply

Back To Top