ಕಾವ್ಯ ಸಂಗಾತಿ
ಹೀಗೊಂದು Online ಅನುಬಂಧ
ವಾಣಿ ಯಡಹಳ್ಳಿಮಠ
ಜೊತೆಯಾಗಿ ಬೆಳೆದಿದ್ದಿಲ್ಲ
ಬಾಲ್ಯವು ಸವೆಸಿದ್ದಿಲ್ಲ
ಸುಖವ ಹೇಳಿಕೊಂಡಿದ್ದಿಲ್ಲ
ದುಃಖವ ಹಂಚಿಕೊಂಡಿದ್ದಿಲ್ಲ
ಹಾಗೆಯೇ ಒಂದೊಮ್ಮೆ Beep ಆಯಿತು
Text open ಮಾಡಿದ್ರೆ Unknown Numberದಾಗಿತ್ತು
ಓದಿ, ಬಾಲ್ಯದ ನೆನಪು ಹಸಿರಾಯಿತು .
ಮೊಗದೊಂದಿಗೆ, ಮನವೂ ನಗುವಂತಾಯಿತು.
Classmateನ Message ಅದಾಗಿತ್ತು
Just ಕುಶಲೋಪರಿಯೊಂದು ಇಣುಕುವಂತಿತ್ತು
ಹೆಸರಿನೊಂದಿಗೆ Number Save ಆಯಿತು
ಹಾಗೆಯೇ ಆಗಾಗ Chat ಶುರುವಾಯಿತು
ಸ್ನೇಹಿತೆಯೆಂದ, ಸುಖದುಃಖ ಹಂಚಿಕೊಂಡ .
ಕೆಲವೊಮ್ಮೆ ಸಹಜ ಮಾತು ,
ಕೆಲವೊಮ್ಮೆ ತಿಳಿಯದ ಮೌನ ,
ಅವನೆಡೆಗೆ ಕುತೂಹಲ ಬೆಳೆವಂತಾಯಿತು .
ಗೆಳೆತನ ತುಸು ಗಟ್ಟಿಯಾಯಿತು ,
ಆಗಾಗ ಹೋಗಿ,
Regular Chat Start ಆಯಿತು.
ಸಲುಗೆಯೂ, ಹೆಚ್ಚಾದಂತಾಯಿತು .
So,,
Easy ಆಗಿ ಸಿಟ್ಟು
Easy ಆಗಿ ಜಗಳ
Easy ಆಗಿ ಕಾಲೆಳೆತ ,
Common ಆಯಿತು .
Textಗಾಗಿ ಸಮಯ ತೆಗೆಯುವಂತಾಯಿತು,
Replyಗಾಗಿ Wait ಮಾಡುವಂತಾಯಿತು.
ಬಹುಕಾಲ ಯಾವುದೂ ಉಳಿಯುವುದಿಲ್ಲವಲ್ಲ..
ಬದುಕೂ ಬೇಸರಗೊಂಡು ಕೊನೆಯಾಗುವಾಗ ,
ಈ ಬಾಂಧವ್ಯ ಕೊನೆಗೊಂಡರೇ ಅತಿಶಯವೇನಲ್ಲ ..
ಈಗೀಗ ಸಮಯದ ಅಭಾವವೋ ?
ಭಾವದ ಅಭಾವವೋ ? ಕಾಡುತ್ತಿದೆ
Online ಬಾಂಧವ್ಯದ ಮಾರ್ದನಿಯು ಮೌನಗುತ್ತಿದೆ ..
ಇಂದಿನ ಯುವಪೀಳಿಗೆಯ
Online ಪ್ರೇಮದ ಆಯಸ್ಸು
ವಾಣಿ ಯಡಹಳ್ಳಿಮಠ ಕಲಬುರಗಿ