ಬಳುವಳಿ

ಕಾವ್ಯ ಸಂಗಾತಿ

ಬಳುವಳಿ

ಅನಸೂಯ ಜಹಗೀರದಾರ.

ಅರೆ…! ವಾಹ್..!ಇದೆಂತಹ ಬಳುವಳಿ ..!
ಗೊಂದಲದಲಿ ಮುಳುಗೇಳುತ್ತಲಿರುವೆ
ಹೇಳಲು ಪರದಾಡುತ್ತಿರುವೆ

ನಾನಾಗಿಯೇ ಪೋಷಿಸಿಕೊಂಡು
ನಿನಗಾಗಿ ಅರ್ಪಿಸಿದ
ಒಂದು ಸ್ವಯಂ ಅರ್ಪಣೆಯ ಪಾತ್ರವನು
ಅದೆಷ್ಟು ಸೊಗಸಾಗಿ ಹೊಡೆದುರುಳಿಸಿದೆ
ಸಾಕಾರವಾದುದನ್ನು ನಿರರ್ಥಕವಾಗಿಸಿದೆ
ಒಂದೇ ಉದಾಸೀನವೆಂಬ ದಾಳವೆಸೆದು
ಬಹುದಿನ ಆಸ್ಥೆಯಿಂದ ಉಪಯೋಗಿಸಿ
ಬೇಸರಿಸಿ ಎಸೆದ ಹಸುಳೆಯ ಆಟಿಕೆಯಂತೆ..!
ಒಂದು ಅಲಕ್ಷ್ಯ ಉಡಾಫೆಯಲ್ಲಿ..,

ನನ್ನ ಸರ್ವಸ್ವವಾದ
ತಲ್ಲೀನತೆ ವಿಲೀನತೆ ಸೃಷ್ಟಿಗೊಂಡು
ಆ ಪರಮ
ಸ್ಥಿತಿಯಲ್ಲಿ ಜೀಕುವಾಗಲೇ….,
ಒಂದೇ ಗಳಿಗೆಯಲ್ಲಿ ..,
ಲಯವಾಗಿಸಿದ ಪ್ರಳಯ ರುದ್ರ ತಾಂಡವ
ಆ ನಿನ್ನ ಉದಾಸೀನ ಮಾತು…
ಆತ್ಮಗೌರವ ಬೆಂಕಿಯಲಿ ಉರಿದ ಹೊತ್ತು..!

ಬಹು ಭರ್ಜರಿ ಈ ಬಹುಮಾನವ
ಬಹು ಜತನದಿ ಕಾಪಾಡುವೆ
ನೆನಪಾಗಿ ಕಾಡದೆ ಇದ್ದೀತೆ..?!
ನಿನ್ನ ಈ ಬಳುವಳಿ;
ಜೀವನದುದ್ದಕ್ಕೂ ….
ಅದೇನೇ ಇರಲಿ..,
ಹೊಸತೊಂದರ
ದ್ವಾರ ತೆರೆಯಲು
ನಾಂದಿಯಾಗಲಿದೆ

ಇದೋ ಧನ್ಯವಾದಗಳು..ನಿನಗೆ.!!.
ನೀನಿತ್ತ ಬಳುವಳಿಗಾಗಿ..!!


ಅನಸೂಯ ಜಹಗೀರದಾರ.

Leave a Reply

Back To Top