ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ

ಈ ತಾಯಿ ನಮ್ಮನಾವರಿಸಿ ಕಷ್ಟ ಸುಖಗಳನ್ನು ಮರೆಸುತ್ತಾಳೆ
ನಮ್ಮಲ್ಲಿಗೆ ಸುಳಿಯದಿರೆ ಬೇಕು ಬೇಡದ್ದನೆಲ್ಲಾ ನೆನಪಿಸುತ್ತಾಳೆ
ಈಕೆ ನಮ್ಮನಾಳಲು ವಿಜಯಂಗೈವುದೇ ಗಾಢನಕ್ತ ಸಮಯದಿ
ಹಗಲಲಿ ಹಲವು ಕೆಲಸಗಳ್ಳ ಸೋಮಾರಿಗಳಿಗೂ ಕೃಪೆ ತೋರುತ್ತಾಳೆ
ಈ ಮಾತೆ ಸಮತಾವಾದಿ ಭೇದ ಭಾವ ತೋರಳು ಎಂದೆಂದಿಗೂ
ತನ್ನ ತೊಳ್ ತೆಕ್ಕೆಯಲಿ ಹೆತ್ತ ತಾಯ ಮಡಿಲಿನಂತ ಆಸರೆ ನೀಡುತ್ತಾಳೆ
ಕಾಲ ಪ್ರವಾಹದಿ ನಮಗೆ ದಿನದ ಹಲವು ಗಂಟೆ ಈ ತಾಯ ಒಡಲು ಬೇಕು
ಈಕೆ ಕೃಪೆ ತೋರದೆ ನಮ್ಮೊಡಲನು ಕಾಯಿಲೆಯ ಆಗರ ಆಗಿಸುತ್ತಾಳೆ
ಕುಂಭಕರ್ಣನ ಬೇಡಿಕೆಯನೂ ಈಡೇರಿಸಿ ಸಲಹಿದಳು ಪ್ರೀತಿಯಲಿ
ತಿಂಡಿಪೋತ ಭೀಮ ಕಾವಲು ಕಾಯೆ ನಿದ್ದೆಬಾರದಾಂಗೆ ನೋಡುತ್ತಾಳೆ
ಕೃಷ್ಣಾ!ಇಂತಹ ಆಮ್ಮನಿಗೂ ಮೋಸಮಾಡುವ ಮನುಜರಿಹರು.
ಕಪಟವನರಿಯದಾಕೆ ನಿದ್ರೆಯ ನಟಿಸುವವರನೂ ಸಲಹುತ್ತಾಳೆ
ಬಾಗೇಪಲ್ಲಿ
(ಇಂದು ಮಹಿಪಾಲ್ರೆಡ್ಡಿ ಗಾರು ಹಾಕಿದ್ದ ಯುಕ್ತಿ ಪ್ರೇರಿತ ಗಜಲ್)