ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ದುರ್ಜನರ ದುರಹಂಕಾರಕ್ಕೆ ಬಲಿಯಾಗುತ್ತಿದೆ ಬದುಕು
ಸಜ್ಜನರ ಒಡನಾಟಕ್ಕೂ ಭಯ ಪಡುತ್ತಿದೆ ಬದುಕು
ಅನುಭವವು ಜೀವನ ನಡೆಸುವುದನ್ನು ಕಲಿಸಿಕೊಡುತ್ತದೆ
ಯಾರನ್ನು ನಂಬಬೇಕೆಂದು ಹೇಳುವುದು ಮರೆಯುತ್ತಿದೆ ಬದುಕು
ವಿಶ್ವಾಸ ಮಾಡದೇ ಬದುಕಿದರೆ ದ್ವೇಷ ಕೋಪಗಳಿಗೆಬಲಿಯಾಗಬೇಕಿದೆ
ಮುಗ್ದ ಮನಸ್ಸಿಗೆ ಶರಣಾಗಿ ದಿಲ್ ನೋಯುತ್ತಿದೆ ಬದುಕು
ಎಷ್ಟು ಗೋಗರೆದರೇನು ಕಟುಕನಿಗೆ ಕನಿಕರ ಬರುವುದೆ
ಭಾವನೆಗಳು ಕಲ್ಲು ಅಲ್ಲಲ್ಲ ಉಕ್ಕಾಗಲು ಬಯಸುತ್ತಿದೆ ಬದುಕು
ಜೀವ ಉಳಿಸಿಕೊಂಡ ಮೀನು ನೀರಿನ ಆಳಕ್ಕೆ ಇಳಿದಿದೆ “ಮಾಜಾ”
ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಲು ಸೆಣಸುತ್ತಿದೆ ಬದುಕು