‘ಮಳೆಗೇಕೆ ನಿನ್ನ ಮೇಲೆ ಪ್ರೀತಿ’

ಕಾವ್ಯ ಸಂಗಾತಿ

‘ಮಳೆಗೇಕೆ ನಿನ್ನ ಮೇಲೆ ಪ್ರೀತಿ’

ಟಿ.ದಾದಾಪೀರ್ ತರೀಕೆರೆ

ಇದು ಮೋಸದ ಮಳೆ
ಅನ್ನಿಸುತ್ತೆ
ನೀನು ಛತ್ರಿ ಇಲ್ಲದೇ
ಬರುವುದನ್ನೆ ಕಾದು
ರಪ ರಪನೆ ಸುರಿಯುತ್ತೆ

ನಾನು,
ನಿನ್ನ ನೋಡಲು
ಕಾದು ನಿಂತೆನೆಂದರೆ ಸಾಕು
ನೀನು ಹೊರಗೆ ಬರಲಾರದಂತೆ
ಸುರಿಯುತ್ತೆ

ಹನಿ ಹನಿಗಳಾಗಿ ನಿನ್ನ
ತೋಯಿಸಿ ಸುಖಿಸುತ್ತೆ
ಜಾರಿ ಬೀಳದೆ
ಕೆಂದಾವರೆಯ ಕೆನ್ನೆಗಳ
ಮೇಲೆ ಅಲ್ಲೇ stay ಆಗಿ
ಮುತ್ತಂತೆ ಹೊಳೆಯುತ್ತೆ

ದೋ………..ಎಂದು
ಸುರಿಯುವ ಮಳೆಯ ದನಿಯನು
Silent ಆಗಿ ಆಲಿಸಿದರೆ
ನಿನ್ನ ಹೆಸರೇ
ಹನಿ ಹನಿಯ ಶಬ್ಧದಲ್ಲು
ಬರೀ ನಿನ್ನ ಹೆಸರು

ಈ ಮುಂಗಾರು ಮಳೆ
ಬೇಕೆಂತಲೇ ನನ್ನೂರ
ರಸ್ತೆಯನು ಕೆಸರಾಗಿಸಿದೆ
ನೀನು ನಡೆದಾಡುವಾಗ
ಕಮಲದ ಹೂವಿನಂತೆ
ಕಾಣಲೆಂದು

“ಹೇಳೆ ಗೆಳತಿ ಈ ಮಳೆಗೇಕೆ ಗೆಳತಿ
ನಿನ್ನ ಮೇಲೆ
ಇಷ್ಟು ಪ್ರೀತಿ “?


Leave a Reply

Back To Top