ಕರ್ತವ್ಯದ ಹೊರೆ

ಕಾವ್ಯ ಸಂಗಾತಿ

ಕರ್ತವ್ಯದ ಹೊರೆ

ಡಾ.ಡೋ ನಾ ವೆಂಕಟೇಶ

ನಿನಗೆ ಗೊತ್ತಿರ ಬಹುದು ನಿನ್ನ
ಬದುಕಿನ ನಿಗೂಢತೆಗಳು
ವಿಷಣ್ಢತೆಗಳು
ಅನಿವಾರ್ಯತೆಗಳು
ವಿಪರ್ಯಾಸಗಳು

ಜೀವ ಬಯಸಿದ್ದೆ
ಜೀವನನಾದರೆ
ಮೆದುಳು ಮಿನುಗುವ
ಗುನು ಗುನು ಹಾಡಾದರೆ
ದಿನ ಪೂರ್ತಿ ಹರ್ಷ.
ಆದರೆ ಚಿನ್ನ ರಾತ್ರೆ ಬಂದು
ಹುಣ್ಣಿಮೆಯ ಹಿಂದೆ ಅಮಾವಾಸ್ಯೆ ಹುಟ್ಟಿ
ಗ್ರಹಣ !

ಅನುದಿನದ ಈ ಸೋಪಾನ
ಮಿನುಗುವ
ಸೊಗಸು
ಮರೆಸುತ್ತೆ ಮೆರೆಸುತ್ತೆ
ಕರ್ತವ್ಯದ ಕರೆ ಹೃದಯದ
ಮೊರೆ ಮಿಗಿಲಾಗಿಸುತ್ತೆ

ಉಸಿರಿರುವ ತನಕ
ನಿಟ್ಟುಸಿರು ಬಿರುಸಾಗುವ ತನಕ!


8 thoughts on “ಕರ್ತವ್ಯದ ಹೊರೆ

    1. ಥ್ಯಾಂಕ್ಸ್ ಸೂರ್ಯ ಸುಂದರ ಪ್ರೋತ್ಸಾಹಕ್ಕೆ ನಿಮ್ಮಅಭಿಮಾನಕ್ಕೆ

  1. Very nice Poem Venkanna. Brings lots of happiness while reading it and looking forward for more. Best wishes

    1. Thanq ಮಂಜಣ್ಣ
      ಎಂದಿನಂತೆ ಹೊಗಳಿಕೆ ಅವಿರತ!

Leave a Reply

Back To Top