ಕಾವ್ಯ ಸಂಗಾತಿ
ಹರಾಜಾದ ಪ್ರೀತಿ
ಶಂಕರಾನಂದ ಹೆಬ್ಬಾಳ


ಹರಾಜಾಗುತ್ತಿದೆ ಪ್ರೀತಿಯ ತೇರು
ಗೋಳಿನಲಿ ಸುಯ್ಯೆಂದು,
ಬೊಬ್ಬೆಯಿಟ್ಟಿದೆ ಒಲವಿನ
ಪ್ರೇಮಸಿಂಹಾಸನ..!!
ಹೃದಯದಲ್ಲಿ ನಿನ್ನ ಹಾಜರಿಯಿಲ್ಲ
ಕಣ್ಣಲ್ಲಿ ತೇವ ಒಸರಿ
ಆಲಿಂಗನದ ಅಮೃತಗಳಿಗೆಯ
ಸವಿಚಣಗಳ ನೆನೆಪಿಸುತ್ತಿದೆ…!!
ನಿರಸವಾದ ರಜನಿಯಲಿ ಶಶಿಯ
ಬೆಳಕು ಮಂದವಾಗುತ್ತಿದೆ
ನಿಸ್ತೇಜ ಕಾಂತಿಯಲಿ ವಧುವಿಲ್ಲದ
ಕಲ್ಯಾಣಮಂಟಪ ಬೀಕೊ ಎಂದಿದೆ
ಸುಡುವ ಸೂರ್ಯ ತಂಪಾಗಿದ್ದಾನೆ
ಕನಸುಗಳು ಕಮರಿಹೋಗಿವೆ
ನಿನ್ನ ನೋಟಗಳು ಸೂಜಿಯ ಮೊನೆಯಿಂದ
ಇರಿಯುತ್ತಿವೆ ಕಣ್ಣಿನಲಿ
ಸದ್ದುಗದ್ದಲವಿಲ್ಲದ ಸಂತೆಯಲಿ
ನಿನ್ನದೆ ನೆನಪಿನ ಅಲೆ
ತನುವ ಬಾಚಿ ತಬ್ಬಲು ಮತ್ತೊಮ್ಮೆ
ಬರುವೆಯಾ ಬಾಲೆ



