ಕೋಶಿಶ್ ಮಾದರಿ ಹನಿಗವಿತೆ

ಕಾವ್ಯ ಸಂಗಾತಿ

ಕೋಶಿಶ್ ಮಾದರಿ ಹನಿಗವಿತೆ

ಮಂಜುನಾಥ ನಾಯಕ

ಕಾವು ಹೆಚ್ಚಾದರೂ,
ಕಾವು ಕಮ್ಮಿಯಾದರು,
ಕೋಳಿ ಮತ್ತು ಮೊಟ್ಟೆಗೆ
ಉಪಯೋಗವಿಲ್ಲ
ಹದವಾಗಿದ್ದರೆ ಮಾತ್ರ
ಮೊಟ್ಟೆಯು ಕೋಳಿಯಾಗುವುದು
ಒಡತಿ;
ಎಂದ ಮನತಾ ಕೋಳಿಗೆ
ಬುಟ್ಟಿ ಮುಚ್ಚಿ ಹೋದ

*

ಬರಸೆಳೆದು ಅಪ್ಪಿದರೆ
ಮೂಳೆ ಚುಚ್ಚುತ್ತೆ ಎನ್ನುವಳು
ಅಂತರಂಗದಲೆ ಅಪ್ಪಿದ್ದೇನೆ
ಎಂಬುದು ಅರಿಯದೆ ಹೋಯಿತೆ!?
ಪುಟ್ಟ ಹೆಂಡತಿಗೆ,
ಎಂದು ನಿಟ್ಟುಸಿರಿಟ್ಟ ವಯಸಾದ ಮನತಾ

*

ಆಗೊಂದು ಕಾಲವಿತ್ತು
ಅಮ್ಮನ ಕೈತುತ್ತಿಗೆ
ನಾಷ್ಟಾ ಊಟ ಸ್ನ್ಯಾಕ್ಸು‌
ಎಂಬ ಹೆಸರುಗಳೆ ಇರಲಿಲ್ಲ
ಹಸಿವಾದ ಕೂಡಲೇ
ಹೇಗೊ ಅರಿತು
ತಟ್ಟೆತುಂಬ ಗಂಜಿ
ಉಪ್ಪಿನಕಾಯಿ ಇಟ್ಟು ತಂದೆ ಬಿಡ್ತಿದ್ದಳು
ಎಂದ ಮನತನ ಕಣ್ಣಲ್ಲಿ ನೀರಿತ್ತು

*

ನಿತ್ಯ ಸಾವಿರ‌ ದುಡಿದರೂ
ಅಂಗೈಯ್ಯಿಯೇ ಸವೆದರೂ
ಉಣ್ಣಲಿಕ್ಕುವ ಕೈಗಳಿಗೆ
ಉದಾರತೆ ದಕ್ಕದಾಗಿದೆ,
ದುಡಿಮೆಯ ಇಲ್ಲದ
ದಿನಗಳಲ್ಲೂ
ಎರಡು ತುತ್ತು ಹೆಚ್ಚೆ ಉಣ್ಣಿಸಿದವಳು
ಅಮ್ಮ
ಎಂದು ಉಂಡ ಕೈ ತೊಳೆದು
ಎದ್ದನು ಮನತಾ

=======================

One thought on “ಕೋಶಿಶ್ ಮಾದರಿ ಹನಿಗವಿತೆ

  1. ಹನಿಗಳ ವಿಷಯ ಚೆನ್ನಾಗಿವೆ. ಬರೆಯುತ್ತಿರಿ

Leave a Reply

Back To Top