ಪುಸ್ತಕ ಸಂಗಾತಿ
ಭಾವಬಂಧು ಕವನ ಸಂಕಲನ ಬಿಡುಗಡೆ
ದಿನಾಂಕ 3-07-2022 ರ ಭಾನುವಾರ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಶ್ರೀಮತಿ ಅನುರಾಧಾ ಶಿವಪ್ರಕಾಶ್ ರವರ ಭಾವಬಂಧು ಕವನ ಸಂಕಲನ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.



ದಿನಾಂಕ 3-07-2022 ರ ಭಾನುವಾರ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಶ್ರೀಮತಿ ಅನುರಾಧಾ ಶಿವಪ್ರಕಾಶ್ ರವರ ಭಾವಬಂಧು ಕವನ ಸಂಕಲನ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು. ಶ್ರೀ ಮಧುರಕಾನನ ಗಣಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭವನ್ನು ಶ್ರೀಮತಿ ಶಂಕರಿ ಶರ್ಮಾ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ
ಪ್ರೊ. ಗಣಪತಿ ಭಟ್ ಕುಳಮರ್ವ ಹಾಗೂ ಸಾಹಿತಿಗಳಾದ ಶ್ರೀ ವೈಲೇಶ್ ಪಿ ಎಸ್ ಕೊಡಗುರವರು ಉಪಸ್ಥಿತರಿದ್ದರು. ಎಸ್ ಕೆ ಎಫ್ ಉದ್ಯೋಗಿ ಹಾಗೂ ಕವಿ ಹರಿನರಸಿಂಹ ಉಪಾಧ್ಯಾಯರವರು ಕೃತಿಯ ಅವಲೋಕನ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಶಶಿಕಿರಣ್ ಆನೆಕಾರ್, ಭಾವಗಾಯನ ನಡೆಸಿಕೊಟ್ಟರು.
ಭವ್ಯಶ್ರೀ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಉದಯಭಾಸ್ಕರ್ ರವರು ನಿರೂಪಿಸಿದರು, ಸುಮಾ ಕಿರಣ್ ಸ್ವಾಗತಿಸಿದರು, ಸಾನು ಉಬರಡ್ಕ ವಂದನಾರ್ಪಣೆ ಸಲ್ಲಿಸಿದರು.
ಹಾಗೆಯೇ ಅಪರಾಹ್ನ ನಡೆದ ಕವಿಗೋಷ್ಠಿಯ ಅಧ್ಯಕ್ಷರಾಗಿ ವಿಜಯವಾಣಿ ದೈನಿಕ ಅಂಕಣಕಾರ್ತಿ ಶ್ರೀಮತಿ ಕವಿತಾ ಅಡೂರುರವರು, ಅಥಿತಿಗಳಾದ ಉದಯಭಾಸ್ಕರ್ ಹಾಗೂ ಗೋಷ್ಠಿಗೆ ಚಾಲನೆ ನೀಡಿದ ಶ್ರೀಮತಿ ಪಾರ್ವತಿ ಕುಳಕೋಡ್ಲುರವರ ಉಪಸ್ಥಿತಿಯಲ್ಲಿ ಕವಿಗಳು ತಮ್ಮ ಕವನ ವಾಚಿಸಿದರು. ಶ್ರೀಮತಿ ಆಶಾ ಮಯ್ಯ ಕಾರ್ಯಕ್ರಮ ನಿರೂಪಿಸಿದರೆ ಚಿ ಶರ್ವ ಪ್ರಾರ್ಥನಾ ಗೀತೆ ಹಾಡಿದರು, ಶ್ರೀಮತಿ ಅನುರಾಧ ಶಿವಪ್ರಕಾಶ್ ವಂದನಾರ್ಪಣೆ ಸಲ್ಲಿಸಿದರು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು

ಉಪಾದ್ಯಾಯ ಎನ್.
ಸುಂದರ ಕಾರ್ಯಕ್ರಮದ ಭಾಗವಾಗುವ ಅವಕಾಶ ಕೂಡಾ ನನ್ನದಾಯಿತು
ಸುಂದರ ಕಾರ್ಯಕ್ರಮ