ಕಾವ್ಯ ಸಂಗಾತಿ
ಕೃಷ್ಣನೆಂಬ ಗಾರುಡಿಗ
ದೀಪಿಕಾ ಚಾಟೆ
ಮಾಧವನ ಕೊಳಲಿಗೆ ರಾಧೆಯು
ನಲಿವಳು ಯಮುನೆಯ ತಟದಲಿ
ಗೋವಿಂದನ ಹೆಜ್ಜೆಯ ಧನಿಯಕೇಳುತ
ಲಜ್ಜೆಯಿಂದ ಕುಣಿದಳು ಗೆಜ್ಜೆಯ ನಾದದಲಿ
ಕೊರಳ ಗಾನವು ಪ್ರೀತಿಯ ಸರಿಗಮ
ಹರಿಸುತ ಮೈಮನದಿ ಪುಳಕಿತವು
ಕಣ್ಣಬಿಂಬದ ನೋಟದಲಿ ನೂರೆಂಟು
ಮಾತುಗಳು ಎದೆಯಲ್ಲಿ ತಲ್ಲಣವು
ಹೃದಯದಿ ಪಿಸುಮಾತೊಂದು
ಗುಣುಗುಣಿಸುತಿದೆ ಮಾಧವನ ಸಂಗದಲಿ
ಒಲವ ತಿಳಿಸುತ ಸಾವಿರ ಕಥೆಯನು
ಮನದಂಗಳದಿ ಬಣ್ಣದ ರಂಗೋಲಿ ಚೆಲ್ಲುತಲಿ
ಕೃಷ್ಣನೆಂಬ ಗಾರುಡಿಗ ಮನವನ್ನು ಗೆದ್ದ
ಒಲವಿನಂದದಿ ಬಳಿ ಬಂದುಹೃದಯವನೇ ಕದ್ದ
ಚೈತ್ರದ ಮಾಮರವದು ಕೋಗಿಲೆಗಳ ಗಾನವು
ವಸಂತನಾಗಮನದಿ ಶೃಂಗಾರ ರಸ ಭಾವವು
ಕೃಷ್ಣನ ಒಲವು ಮತ್ತು ಗಾನವು ಶ್ರೇಷ್ಠ !