ಗಜಲ್

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ನನ್ನ ಪ್ರಿಯೆ ಚಂದ ಮುದ್ದೆ ಬಸ್ಸಾರು ಮಾಡ್ತಾಳೆ ಅದು ನನ್ಗ ಹಿಗ್ಗು ಗೊತ್ತಾ
ನಿದ್ದೆಂದೆದ್ದಾಗ ಮೇಕಪ್ಪಿಲ್ದೆಯೇ ಕಾಣ್ತಾಳವಳು ಮಲ್ಲಿಗೆ ಮೊಗ್ಗು ಗೊತ್ತಾ.

ಕದ್ದು ಮುಚ್ಚಿ ಅವಳ ಮಾತಾಡೋಕಂತ ದಿನವಿಡೀ ಸುತ್ತುವೆ ಅವಳ ಕೇರಿ ವೃಥಾ
ಅವಳಪ್ಪ! ನನ್ಗಾಗೊಮಾವ ಕೆಮ್ಮುತ್ತಾ ಕುತಿರ್ತಾನ ಅವಂಗ್ ಉಗ್ಗು ಗೊತ್ತಾ

ಸಕ್ರಿ ಗೊಂಬೆ ಅವಳು ಕಾಲೇಜಿ ಓದಿಲ್ಲ ಪಟ್ಣಕಂಡಿಲ್ಲ ಷೋಕಿಯ ಮಾಡಿಲ್ಲ
ಆಸೆಯಾದ್ರೂ ನನ್ಕೂಡ ಮಾತು ತಪ್ ಅಂತಾಳ ಆಕೀಗೆ ಬಲು ಸಿಗ್ಗು ಗೊತ್ತಾ

ನನ್ಮನಿ ಬೆಳಗೋಳು ಬಟ್ಟೆ ಒಗೆಯೋಕೆ ಹೊಳೆಗೊಂಟ್ರೆ ನಾನೂ ಹಾದಿಲಿ ಕಾಯುವೆ
ಊರೋರ್ಗೆ ನಮ್ಮ ಪಿರೀತಿ ಸುಳಿವುಸಿಕ್ಕಿ ಗುಸಗುಸ ಅಂದ್ರೂ ನನಗಿಲ್ಲ ಎಗ್ಗು ಗೊತ್ತಾ

ಕಿಷ್ಣಾ ಶಿವ ಒಲಿದ್ರೆ ಅಂತಾರಲ್ಲಾ ಕೊರಡು ಕೊನರುವುದಯ್ಯಾ ನನಗೆ ದಕ್ಕಿದರೆ
ಮದುವ್ಯಾಗ ನಂಕಿಂತ್ ಉದ್ದ್ಯಿರೂಳಗೆ ತಾಳಿಕಟ್ಟೋಕೆ ಏಳ್ತೀನಿ ಬಗ್ಗು ಗೊತ್ತಾ.


Leave a Reply

Back To Top