ಗಜಲ್

ಕಾವ್ಯ ಸಂಗಾತಿ

ಗಜಲ್

ಮಂಡಲಗಿರಿಪ್ರಸನ್ನ

ಅವಳ ನಗು ತುಟಿಯೊಳು ಉಳಿದು ಹೋಗಿದೆ
ಇವನ ನೋವು ಎದೆಯೊಳು ಉಳಿದು ಹೋಗಿದೆ

ಅವಳ ಬಿಂಬ ಮೋಡದ ಚಂದ್ರನಾಗಿ ಇಣುಕಿದೆ
ಇವನ ಆಸೆ ಕಣ್ಣೊಳು ಉಳಿದು ಹೋಗಿದೆ

ಅವಳ ಮಾತಿಗೆ ಮುಗ್ಧತೆ ಕೋಟೆ ಕಾವಲಾಗಿದೆ
ಇವನ ಖುಷಿ ಬೇಗುದಿಯೊಳು ಉಳಿದು ಹೋಗಿದೆ

ಅವಳ ಸೇರುವುದು ದೂರ ದಿಗಂತದ ಕನಸು
ಇವನ ಚಿಂತೆ ಮನದೊಳು ಉಳಿದು ಹೋಗಿದೆ

ಅವಳ ತಳಮಳ ಏನೆಂದು ತಿಳಿಯದು ‘ಗಿರಿ’
ಇವನ ನಲ್ಮೆ ಮೌನದೊಳು ಉಳಿದು ಹೋಗಿದೆ


Leave a Reply

Back To Top