ಕಾವ್ಯ ಸಂಗಾತಿ
ನಾರಿಯ ಸಿಂಗಾರ
ಗಾಯಿತ್ರಿ ಬಡಿಗೇರ.
ಹಣೆಗೆ ಸಿಂಧೂರದ ಬೊಟ್ಟಿಟ್ಟು ಕಣ್ಣಿಗೆ ಕಾಡಿಗೆಯ ಗೆರೆಹಚ್ಚಿಟ್ಟು
ನೀಳ ಮೂಗಿಗೆ ಮಿಂಚಿನ ನತ್ತಿಟ್ಟು
ಈ ಸಿಂಗಾರದ ಅಂದ ಕಾಣಲು
ಕನ್ನಡಿಯ ಮುಂದೆ ಕಳೆವಳು ಘಳಿಗೆ ಹೊತ್ತಲ್ಲಿ
ಮಾರುದ್ದ ಜಡೆಯ ಗುಂಗುರೇಳೆಯ ಮಲ್ಲಿಗೆಯ
ಕೋಮಲವಾದ ಕೇಶ ರಾಶಿಯ
ಬಿಚ್ಚಿ ಬಿಚ್ಚಿ ಹಿಕ್ಕಿ ಕಟ್ಟಲು
ಕನ್ನಡಿಯ ಮುಂದೆ ಮರೆವಳು ತನ್ನ ಮೈಮನವಲ್ಲಿ
ಬಂಗಾರದ ದಡಿ ಅಚ್ಚಿನ
ಪೀತಾಂಬರ ಸೀರೆಯನ್ನು
ತಿದ್ದಿ ತೀಡಿ
ಮರಳಿ ಹೊರಳಿ ನೀರಿಗೆ ಹೋಯ್ದು
ಕನ್ನಡಿಯ ಮುಂದೆ ತಿರಗಿ ಮುರಗಿ ನೋಡುವಳು ತನ್ನ ಸಿಂಗಾರವನ್ನಲ್ಲಿ