ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣ ನರೇಂದ್ರ

ಜಗದಗಲ ಕವಿತೆ

ನಿನಗಾಗಿ ಬರೆದ
ನೂರೊಂದು ಸಾಲುಗಳು
ನನ್ನೆದೆಯಲ್ಲೆ ಉಳಿದಿವೆ
ಒಂದಕ್ಕೆ ಹತ್ತಾಗಿ
ಹತ್ತಕ್ಕೆ ನೂರಾಗಿ
ನನ್ನನ್ನೇ ಕಾಡುತ್ತಿವೆ

migrating canada geese in silhouette flying over lake at sunrise (XL)

ಬಾನುವಿಗೂ ಬುವಿಗೂ
ಬಿಡಿಸದ ನಂಟು
ಅವನು ಎದ್ದಕೂಡಲೇ
ಇವಳತ್ತ ಬಾಗುತ್ತಾನೆ
ಇವಳು ಖುಷಿಯಿಂದ ಬೀಗುತ್ತಾಳೆ
ಉರಿಬಿಸಿಲು ಮೈ ಸುಟ್ಟರೂ ಒಪ್ಪಿಕೊಳ್ಳುತ್ತಾಳೆ
ಇವನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾನೆ
ಭೂಮಿಗೆಂಥ ತಾಳ್ಮೆ
ನಿತ್ಯ ಹೊಸತು ಬಲ್ಮ

ಎಲೆಗಳನ್ನೆಲ್ಲ ಕಳೆದುಕೊಂಡು
ಬೆತ್ತಲಾದ ಮರದಲ್ಲೀಗ
ಚಿಗುರೊಡೆದ ಕನಸುಗಳು
ಮಾರಾಟಕ್ಕಿವ

ನಾ ಹಕ್ಕಿಯಾದರೆ ನೀ ರೆಕ್ಕೆ ಯಾಗು
ಹಾರುತ್ತ ನೋಡೋಣ ಜಗದ ಬಿಂಬ
ನಾ ಚುಕ್ಕಿಯಾದರೆ ನೀ ಹೊಳಪಾಗು
ಬೆಳಕ ಬಿತ್ತೋಣ ಜಗದ ತುಂಬ


       ಅರುಣಾ ನರೇಂದ್ರ

2 thoughts on “

Leave a Reply

Back To Top