ನಮ್ಮ ಹೊಣೆ

ಕಾವ್ಯ ಸಂಗಾತಿ

ನಮ್ಮ ಹೊಣೆ

ಶ್ರೀವಲ್ಲಿ ಮಂಜುನಾಥ

ಸ್ವಚ್ಛ ಸುಂದರ
ಪರಿಸರ ಬೇಕೆ ?
ಸರಳ ನಿಯಮಗಳ
ನಾವನುಸರಿಸುವ!

ತ್ಯಾಜ್ಯೋತ್ಪಾದನೆ
ಕಡಿಮೆಗೊಳಿಸುತಾ;
ಸಂಸ್ಕರಿಸುತಲದ
ಗೊಬ್ಬರ ತಯಾರಿಸುವ!

ಇತಿಮಿತಿಯಲಿ ನೀರನು
ಬಳಸಿ; ನೀರಿನ ಮೂಲ
ಸ್ವಚ್ಛವಾಗಿರಿಸಿ,ಗುಂಡಿಯ
ತೆಗೆದು ಮಳೆನೀರಿಂಗಿಸುವ!

ನೆಲ,‌ ಜಲ, ವಾಯು
ಮಲಿನಗೊಂಡರೆ;
ಮಾನವನಿಗೆಲ್ಲುಹುದು
ಬೇರೊಂದು ನೆಲೆ !

ಇಂಧನ ಬಳಕೆಯಲಿ
ಕಟ್ಟೆಚ್ಚರವಿರಲಿ;
ನವೀಕರಣಗೊಳುವ
ಇಂಧನಕ್ಕೆಡೆಯಿರಲಿ !

ಒಂದೋ, ಎರಡೋ
ಮಗು ನಗುತಿರಲಿ;
ಜನಸಂಖ್ಯೆಗೆಂದೂ
ಕಡಿವಾಣವಿರಲಿ!

ಕಾಡನು ಕಡಿದು
ಕೃಷಿ ಮಾಡದಿರಿ,
ಕೃಷಿ ಭೂಮಿಯಲಿ
ಮನೆ ಕಟ್ಟದಿರಿ !

ಸ್ವಚ್ಛ ಪರಿಸರದಲಿ
ನಮ್ಮುಳಿವಡಗಿದೆ;
ನಿರ್ಮಲ ಸ್ಥಳದಲಿ
ದೇವಾಲಯವಿದೆ !

ಪರಿಸರ ಸಂರಕ್ಷಣೆ
ನಮ್ಮೆಲ್ಲರ ಹೊಣೆ !


Leave a Reply

Back To Top