ಕಾವ್ಯ ಸಂಗಾತಿ
ಮಮತಾ ಶಂಕರ್
ಮಾತೆಂಬ ಕ್ರೌರ್ಯ
ಎದೆಗೆ ಇರಿವ ಅವನ ಮಾತು
ಯಾವ ಚಾಕು ಚೂರಿ ಮಸೆದರೂ
ಇರದಂತೆ ಹರಿತವಿತ್ತು
ಒಂದೇ ಏಟಿಗೆ ಎದೆಗೆ ನಾಟಿ ಒಡೆದು ಹೋದಂತೆ ಹೃದಯ
ಮಾತೆಂದರೆ ಕ್ರೌರ್ಯ
ಮೈಯ ಕಣಕಣವೂ ಘಾಸಿಗೊಂಡು
ಯಾವ ಬೆಂಕಿ ಕಿಡಿ ತಾಕಿಸದೇ
ಸೀದು ಕರಕಲಾಗಿ ಹೋಯಿತು ಮನಸು
ಅವನ ಆ ತಿರಸ್ಕಾರ ನೋಟಕೆ
ನೋಟವೆಂದರೆ ಬೆಂಕಿ
ನಾನು ಮಾತಿನಿಂದ ಇರಿದು ಕೊಲ್ಲಲಾರೆ ಯಾರನೂ
ನನ್ನ ಮಾತು ಹರಿತವಿಲ್ಲ
ತಿರಸ್ಕಾರ ಭಾವದಿಂದ ಸುಡಲಾರೆ ಯಾರನ್ನೂ
ಕಣ್ಣ ನೋಟ ತೀಕ್ಷ್ಣವಲ್ಲ
ನಾನೀಗ ಮೌನದ ಮೊರೆ ಹೋಗಿದ್ದೇನೆ
ನಾನು ನೋಡದೆ ಮಾತಾಡದೆ
ಅವನು ಧಗಧಗಿಸುತ್ತಿದ್ದಾನೆ
ಬದುಕಿಕೊಳ್ಳಲಿ ಬಂದರೆ
ಇನ್ನೂ ಹಾಗೇ ಇದೆ ನನ್ನೊಳಗಿನ
ಎದೆಯ ಅಮೃತ ಬಿಂದು
ಆರ್ದ್ರತೆ ತುಂಬಿದ ಮಾತು
ಧನ್ಯವಾದಗಳು ಮೇಡಂ ನಿಮ್ಮ ಪ್ರತಿಕ್ರಿಯೆಗೆ
ತುಂಬಾ ಸೊಗಸಾಗಿದೆ
ಧನ್ಯವಾದಗಳು ಮೇಡಂ
ಒಮ್ಮೊಮ್ಮೆ ಮೌನವೂ ಹರಿತ ಇರಿತ. ಮಾತಿಗಿಂತ ಏನಲ್ಲ. ಹರಿತವಾಗಿದೆ ಕವನ . ‘ನುಡಿದರೆ ಮುತ್ತಿನ ಹಾರದಂತಿಲಿ’ ಎಂದಿದ್ದು ಅದಕ್ಕೇ.
ಧನ್ಯವಾದಗಳು ಮೇಡಂ
ಗಂಡು ಎಷ್ಟೇ ಕಠಿಣನಾದರೂ ಹೆಣ್ಣಿನ ಹೃದಯ ಸದಾ ಅವನನ್ನು ಕ್ಷಮಿಸಿ ಪ್ರೀತಿಸುತ್ತಲೇ ಇರುತ್ತದೆ. ತುಂಬಾ ಸೊಗಸಾಗಿದೆ ಮೇಡಂ
ಕವನ.
ಧನ್ಯವಾದಗಳು ಮೇಡಂ
Sooper …
ಥ್ಯಾಂಕ್ಯೂ