ಆಕಾಶವೆಂಬ ಭೋಧಿವೃಕ್ಷದ ಕೆಳಗೆ

ಕಾವ್ಯ ಸಂಗಾತಿ

ಆಕಾಶವೆಂಬ ಭೋಧಿವೃಕ್ಷದ ಕೆಳಗೆ

ವೈ ಜಿ ಅಶೋಕ್ ಕುಮಾರ್

ಮಾತುಗಳ ಮಾನಿನಿಗೆ
ಸಿಲುಕಿ
ಮನಸ ಸರೋವರಕೆ
ಕಲ್ಲೆಸೆದು
ರಾಡಿಗೊಳಿಸದಂತೆ
ಮೌನದ ನಿಶೆಗೆ
ಮಾರು ಹೋಗಿ
ಪವಡಿಸಿದ್ದೇನೆ
‘ಆಕಾಶವೆಂಬ
ಭೋಧಿವೃಕ್ಷ’ ದ
ಕೆಳಗೆ

ಹೀಗೆಲ್ಲಾ ಇದ್ದನಂತೆ
ಬುದ್ದನೆಂಬ್ಬೊಬಾತ
ಅವನಂತೆ ನಾನೆಂಬ
ಸೋಗಿನ ಪರಿಧಿಯಲಿ

ದುರಾಶೆಗಳ ದು:ಖದ
ಈ ದುರಿತ ಕಾಲದಲಿ
ನಿರಾಶೆಗಳ ನೀಗುವ
ನೆನಪುಗಳ ಅಳಿಸಲಾಗದೇ

ಮೌನದ ಮೊರೆಹೊಕ್ಕು
ಮಲಗಿದ ಮನಸಿನ ನಿಶ್ಶಬ್ದದ ನಿಮಿಷಗಳ ಎಣಿಸುತ್ತ
ಧೀರ್ಘ ಉಸಿರಾಟವ ವಿಸ್ತರಿಸಿ


ಕುಳಿತಲ್ಲಿಯೇ ಧೇನಿಸುತ್ತ,

ಸುಳ್ಳಿನ ದಾರವ ಎಳೆದೆಳೆದು ನೇಯ್ದ ಸ್ವಾರ್ಥದ ಬಲೆಯೊಳಗಿನ ಜಗತ್ತನ್ನು ಜಾಡಿಸುತ್ತ
ಅಸತ್ಯದ ನಾಲಿಗೆಯ ನಾಲೆ ಹರಿಯದಂತೆ ನನ್ನ ಪಾಲಿಗೆ

ಬೇಡುವ ನರಕಕ್ಕಿಳಿಸದೇ
ನೀಡುವ ಸುಖವೆನಗೆ
ಕರುಣಿಸೆನ್ನ
ಭೋಧಿವೃಕ್ಷವೇ…


Leave a Reply

Back To Top