ಕಾವ್ಯ ಸಂಗಾತಿ
ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್
ಬುದ್ಧ ಗಜಲ್
ಆಸೆಯೇ ದು:ಖಕ್ಕೆ ಮೂಲ ಅಂತ ಅದೇಕೆ ಹೇಳಿದೆ ? ನೀ ಹೇಳು ಬುದ್ಧ
ಆಸೆಯೇ ಇರದಿರೆ ಈ ಜಿಂದಗಿಯೇಕೆ ಬೇಕಿದೆ ? ನೀ ಹೇಳು ಬುದ್ಧ
ಸಾವು ನೋವು ನೋಡಿ ಸಾಮ್ರಾಜ್ಯವ ತೊರೆದು ಜ್ಞಾನದಾಸೆಯನರಸಿ ನೀ ಹೋದಿ
ಇಲ್ಲಿ ಉಳಿದ ನಮ್ಮ ಹುಲುಮಾನವರ ಗತಿ ಏನಾಗಿದೆ ? ನೀ ಹೇಳು ಬುದ್ಧ
ಬದುಕಲಿ ಏನಿಲ್ಲದವರೇ ಕೋಟಿ ಕೋಟಿ ಜನ ನಾಳೆಯ ಭರವಸೆಯ ಮೇಲೆ ಬದುಕಿಹರು
ಬಯಕೆಗಳೇ ಬೇಡವೆಂದರೆ ಬದುಕುವದಕೆ ಅರ್ಥವೆನಿದೆ ನೀ ಹೇಳು ಬುದ್ಧ
ಬದುಕಿನ ಸವಿ ಸವಿಯದವರೇ ತುಂಬಿಹರಿಲ್ಲಿ ನಾಳೆ ಬರಬಹುದೆಂಬ ಕನಸಲಿಹರು
ಸಂಸಾರಿಗರಿಗೆ ಆಸೆಗಳು ಸಹಜವಲ್ಲವೆ ? ಬೇರೆನಿದೆ ನೀ ಹೇಳು ಬುದ್ಧ
ಎಲ್ಲರೂ ನಿನ್ನಂತೆ ಸಿದ್ಧ ಆಗಲಾಗುವದೇ ಬುದ್ಧ ಆದರೆ ಈ ಸೃಷ್ಟಿಯ ಗತಿ ಏನಾದಿತು
ಹೊನ್ನಸಿರಿ”ಆಸೆಯಲ್ಲ ದುರಾಸೆಯೇ ದು:ಖಕ್ಕೆ ಮೂಲವಿದೆ ನೀ ಹೇಳು ಬುದ್ಧ.
ಸಿದ್ಧರಾಮ ಹೊನ್ಕಲ್
ಆಸೆಯನ್ನು ತೀರಿಸಲೆಂದು ಕೆಲಸ
ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ
ನಿರೀಕ್ಷೆಯಂತೆ ಫಲ ಸಿಗದರೆ ನಿರಾಸೆ
ನಿರಾಸೆಯ ದಮನಕ್ಕೆ ಯುದ್ಧ
ಯುದ್ಧದಲ್ಲಿ ಗೆದ್ದರೆ ರಾಜ್ಯ
ರಾಜ್ಯ ವಿಸ್ತರಣೆಗೆ ಮತ್ತೆ ಮತ್ತೆ ಯತ್ನ
ಜೀವನವೆಲ್ಲಾ ಈ ವಿಷ ವರ್ತುಲದಲ್ಲಿ
ಸಿಲುಕಿ ನಲುಗುವುದು ಯಾವ ಪುರುಷಾರ್ಥ ಸಾಧನೆಗಾಗಿ?
However good thinking