ಕಾವ್ಯ ಸಂಗಾತಿ
ನಿರೀಕ್ಷೆ
ಡಾ. ನಿರ್ಮಲ ಬಟ್ಟಲ
ಅವನು ಚಂದ್ರ
ನಾನು ಭೂಮಿ….
ಬೆನ್ನು ಹತ್ತುವಾ
ನನ್ನ ಸುತ್ತವಾ….
ಮೊಡದೊಳಗೆ
ಅಡಗಿ ಪಿಡಿಸುವ…
ತಾರೆಗಳ ಜೋತೆ
ಸೇರಿ ಕಾಡಿಸುವ….
ಒಂಟಿಯಾಗಿ
ಬಿಟ್ಟು ನನ್ನ ,ಮಾಯವಾಗುವ…
ಬೆಳ್ಳಿ ಗೆರೆ ಮೂಡುವ ವರೆಗೆ
ಮತ್ತೆ ನಿರಾಳ ಮೌನ ಕಗ್ಗತ್ತಲು…
ಮತ್ತೆ ಬರುವ ಹಂಬಲಿಸಿ
ರಮಿಸುವ ಎಲ್ಲ ಮರೆಸಿ….
ಕಾತರಿಸುವ ಕಾಣಲು
ಹಾತೊರೆವ ಸಂಧಿಸಲು….
ಬಿಡಿಸಿಕೊಂಡು
ತಾರಾಬಳಗ….
ಸರಿಸಿಕೊಂಡು ಮೋಡಗಳ
ಸೆರಗ….
ಅವನಿಯ ನೋಡಲವನು
ಬಂದೆ ಬರುವ….!!
ಕಗ್ಗತ್ತಲ ಸರಿಸಲು
ಬೆಳದಿಂಗಳ ಕಂದೀಲ
ತರುವ….!!
———————
ಸುಂದರವಾದ ಕವಿತೆ ಮೇಡಂ.