ಪಧವೀಧರರು

ಕಾವ್ಯ ಸಂಗಾತಿ

ಪಧವೀಧರರು

ಅನಿತಾ

ಬಂದು ತಲುಪಿದೆವಾ
ವಿದಾಯದ ಹೊಸ್ತಿಲಿಗೆ
ಪದವೀಧರರೆಂದು ಪ್ರಯಾಣಿಸುವ
ಹಾದಿಗೆ…

ಬೆರೆತಿದ್ದು, ಬೇರೆಯಾದದ್ದು
ಬಯಸಿದ್ದು, ಬೆಸುಗೆಯಾದದ್ದು ನೂರಾರು
ಕಲಿತದ್ದು, ಕಲಿಸಿದ್ದು
ಕೂಡಿಸಿದ್ದು, ಕಾಡಿಸಿದ್ದು ಹಲವಾರು!

ಮಚ್ಚ, ಬ್ರೋ, ಬೇಬಿ ಪದಗಳು
ಸಾರ್, ಮೇಡಮ್ ಸಾಲಲಿ ಕಳೆದು ಹೋಗುವುದೇ?
ವರ್ಕ್, ಪ್ರೆಷರ್, ಹೈಕ್ ಗಳ
ಪಾಲಾಗುವುದೇ?

ಏನನ್ನೋ ಉಳಿಸಿಕೊಂಡಂತೆ
ಮನಸು
ಮತ್ತೇನನೋ ಬೆಳೆಸಿ ಬದಲಾಯಿಸಿತೇ
ಕನಸು!

ಅದೇನೇ ಇರಲಿ,
ನಾವೀಗ ಪದವೀಧರರು.. ಪದವೀಧರರು..


Leave a Reply

Back To Top