ಅಮ್ಮಂದಿರ ದಿನದ ವಿಶೇಷ

ಅಮ್ಮಂದಿರ ದಿನದ ವಿಶೇಷ

ಬನದ ಕರಡಿ

ಡಾ. ವಾಯ್ .ಎಮ್. ಯಾಕೊಳ್ಳಿ

ಇಂದು ವಿಶ್ವ ತಾಯಂದಿರ ದಿನವಂತೆ.ತಾಯಿ ತಂದೆಯರ ನೆನೆಯಲು  ಒಂದು ದಿನದ ಅಗತ್ಯ ಇದೆಯೇ? ಅಥವಾ ಒಂದೆ ದಿನನೆನೆದು ವಿಶ ಮಾಡಿ‌ಕವಿತೆ ಬರೆದು ಸ್ಟೇಟಸ್ ಹಾಕಿ ಸಂಭ್ರಮ ಪಡುವ ನನ್ಮ ಇಮದಿನ ಕಾಲದ ಹುಚ್ಚು ಹವ್ಯಾಸಗಳು ತಾಯಿ ಜೀವಕೆ ಬೇಕೆ ? ಮಿಲಿಯನ್ ಡಾಲರ್ ಪ್ರಶ್ನೆ .ನಾವು ಆಚರಿಸುವ ಎಲ್ಲದಿನಗಳೂ ಅಷ್ಟೇ.ಬದಲಾದ ಕಾಲದೊಂದಿಗೆ ನಾಚು ಹುಚ್ಚು ಹೊಳಡಯಲ್ಲಿ ಕೊಚ್ಚಿ ಹೋಗುವ ಒಂದು ಭಾಗವಾಗಿ ಹೊರಟಿದ್ದೇವೆ ಎನ್ನಯವದು ಕೆಲವು ಸೂಕ್ಷ್ಮಗಮನಸುಗಳ ಪ್ರಶ್ನೆ.

ಆದರೆ ಇಷ್ಟೂ ತೀರಾ ಭಾವನಾರಹಿತರಾಗಬಾರದು.ಅವ್ವ ನನ್ನೋ ಅಪ್ಪನನ್ನೋ ಕುರಿತು ಒಂದು ದಿನ ಅಂತ ಪಿಕ್ಸಮಾಡಿ ಆಚರಣೆ ಮಾಡಿ ಸಂಭ್ರಮಿಸೊದರಲ್ಲಿ ಏನು ತಪ್ಪಿದೆ? ತೀರಾ ಇಷ್ಟು ನೆಗೆಟಿವ್ ಆಲೊಚನೆ ಯಾಕೆ?ವಿಶ್ವದ ಪ್ರಜೆಗಳಾದ  ನಾವು  ವಿಶ್ವ ರೂಢಿಸಿಕೊಂಡು ಬಂದ ದಿನಗಳ ಆಚರಣೆಯಲ್ಕಿ ಏನು ತಪ್ಪು? ಯಾಕೆ ಎಲ್ಲದರಲ್ಲೂ ಹುಳುಕು ಹುಡುಕುತ್ತೀರಿ ಎಂದು ಪ್ರಶ್ನಿಸುವ  ಮನಸುಗಳೂ ಇವೆ .

ಆದರೆ ನಮ್ಮ ಮುಖ್ಯ ಪ್ರಶ್ನೆ ಇರೋದು ಆಚರಣೆಯ ಬಗ್ಗೆ..ಒಂದೇ ದಿನ ಆಚರಿಸಿ ಸುಮ್ಮನಾಗಬೇಕೆ? ಅಥವಾ ನಿತ್ಯ ಸ್ಮಾರರಿಸಬೇಕೇ? ನಮನ ಔಕರಿಯೋ ಉದ್ಯೋಗವೋ ಇಂದು ಯಾವುದ್ಯಾವುದೋ ಕಾರಣಕ್ಕೆ ಅಪ್ಪ ಅವ್ವನನ್ನು ಅವರ ಮೂಲ ನೆಲೆಯಲ್ಲಿ ಬಿಟದಟು ಅಥವಾ ಇಬ್ವರು‌ಮಕ್ಕಳಿದ್ದರೆ ಅವ್ವನನ್ನು ಒಬ್ಬ ಅಪ್ಪನನ್ಬು ಒಬ್ಬ ಮಗ ಹಂಚಿಕೊಂಡು ಅಗಲಿಸಿ ಬಾಞಲಿಸುವ ವಿಪರ್ಯಾಸವೇ ಇಂದು ಅಧಿಕ .ಇನನೂ ಒಂದು ವಿಪರ್ಯಾಸವೆಂದರೆ ಸಮಯಾಭಾವದ ನೆವ ವೊಡ್ಡಿ ಊರಲ್ಕಿ ಇರುವ ತಂದೆತಾಯಿಯರ ಬಾಎಟಿಗೂ ಹೋಗದ ಮಕ್ಕಳೂ ಇರುವದನ್ನು ಕಾಣುತ್ತೇವೆ‌ಮತ್ಊ ಹೇಳಬೆಕೆಂದರೆ ಅಂತವರಲ್ಲಿ ನಾವೂ ಸೇರಿರುತ್ತೇವೆ.

ಅಪ್ಪ ಅವ್ವನನ್ನು ಅಗಲುಸಿದ ಚಿತ್ರಕ್ಕೆ ಕನ್ಬಡದ ಕವಿಯತ್ರಿ ಳಿತಾ ಸಿದ್ಬಸಯ್ಯನವರ ಕವಿತೆ ಒಂದು ಹೂ ಹೆಚ್ಚೊಗೆ ಇಡ್ತೀನಿ ಎಂಬ ಪದ್ಯಬಾಎ ಸಾಕ್ಷಿ.

ಅವ್ವನನ್ನು ನಾವು ನೆನೆಯಬೇಕಾದನಪರಿಗೆ ನಮಗೆ ಮಾದರಿ  ನಮ್ಮ ಜನಪದ ಮಗಳು.ಆಕೆ ಗಂಡನ‌ಮನೆಯಲ್ಲಿದ್ದರೂ ಅವ್ವನ‌ನೆನಪಿಸಲು ಹಿಂಜರಿಯಳು .ಆಕೆಗೆ ತಾಯಿಯನ್ನು ಸ್ಮರಿಸಲು ವೇಳೆಯ ಮಿತಿಯೂ ಇಲ್ಕ ಹಡೆದವ್ವನ ನೆನೆಯಲು ಯಾ ಯಾಳೆ ಯಾ ಹೊತ್ತು ಎಂದು ಪ್ರಶ್ನಿಸುವ  ಜನಪದ ಗರತಿ ಪವಿತ್ರ‌ಕ್ಷೇತ್ರಗಳೆಂದು ಕಾಶಿ‌ ರಾಮೇಶ್ವರಗಳಿಗೆ ಹೋಗಲು ಇಷ್ಟಪಡಲಾರಳು. ಆಕೆಗೆ ನಿಜವಾದ ಕಾಶಿ‌ರಾಮೇಶ್ವರ ತಾಯಿಯೆ ಪಾದದಡಿಯೇ ಇದೆ

ಆಕೆ ನಮ್ಮನ್ನೇ ಕೇಳುತ್ತಾಳೆ

ಕಾಶಿಗಿ ಹೋಗಾಕ ಏಸೊಂದು ದಿನ ಬೇಕ

ತಾಸೊತ್ತಿನ್ಹಾದೆ ತವರೂರ/ದಾರಿಲಿ

ಕಾಶಿಕುಂತಾಳೆ ಹಡೆದವ್ವ

ಇದು ಅವಳ ತಾಯಿಯ ಕುರಿತ ಅಭಿಮಾನ .ತಾಯಿಯಿಲ್ಲದ ತವರನ್ನು ನೆನೆಯಳು.ತಾಯಿಯಿಲ್ಲದ ತವರಿಗೆ ಹೋಗದಿರು‌ ನನ್ನ‌ ಮನವೆ  ಎಂದು ನಿಗ್ರಹಿಸುತ್ತಾಳೆ.

.ಅವ್ವ ನಮ್ಮ‌ ಹೊಸಗನ್ನಡ ಕಾವ್ಯದಲ್ಕಿ ಢಾಳಾಗಿ‌ಕಾಣಿಸಿಕೊಳ್ಳ ತೊಡಗಿದ್ದು ಲಂಕೇಶರ ಅವ್ವ ಕವಿತೆಯ‌ ಮೂಲಕ .ಆಮೇಲೆ ಅವ್ವನ ಹೆಸರಿನ ಆರು ಕವಿತೆ ಡಾ.ಸರಜೂ‌ಕಾಟ್ಕರ್ ಬರೆದರು .ಬಾಗಲಕೋಟೆಯ ಕಥೆಗಾರ ಅಬ್ವಾಸ್‌ಮೇಲಿನ‌ಮನಿ ಅವ್ವನ‌ಕುರಿತು ಬಂದ ಕವಿತೆಗಳ ಸಂಪಾದಿತ ಸಂಕಲನ ತಂದರು .ಗದಗಿನ ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ  ವಸ್ತ್ರದ ಅವರು ಶಗರೀ ಬಸವರಾಜ‌ ಬೊಮ್ಮಾಯಿಯವರ ಅವ್ವ ಪ್ರತಿಷ್ಠಾನಕ್ಕೆ ಪ್ರತಿವರ್ಷ ಕನ್ನಡಕವಿತೆಗಳಲ್ಲಿ ಅವ್ವ,ಪ್ರಬಂಧಗಳಲ್ಲಿ ಅವ್ವ,ಕಥೆಗಳಲ್ಲಿ ಅವ್ವ, ಆತ್ಮಕಥೆಗಳಲ್ಲಿ ಹೀಗೆ ಅವ್ವನ ಕುರಿತ ಸೀರಿಸ್ ಪುಸ್ತಕಗಳನ್ನೇ ಸಂಪಾದಿಸಿಕೊಡುತ್ತಿದ್ದಾರೆ.   ಈಚೆಗೆ ಗೆಳೆಯ ರಮಜಾನ್ ಹೆಬಸೂರು ತಮ್ಮ ಒಂದು ಸಂಪಾದಿತ ಗಜಲ್ ಸಂಕಲನಕ್ಕೆ “ಅವ್ವ ನಡಿಯ ಸ್ವರ್ಗ’ ಎಂಬ ಹೆಸರಿಸಿದ ನೆನಪು. ಖ್ಯಾತ‌ ಕವಿ ನಾಗೆಶ ನಾಯಕ ತಮ್ಮ ಹೊಸ ಮನೆಗೆ ಅವ್ವ ಎಂದು‌ ಹೆಸರಿಸಿದ್ದಾರೆ .ಅಂದು‌ನಡೆದ ಕವಿಗೋಷ್ಠಿಯಲ್ಲಿ ಅವ್ವ ಮತ್ತೆ ಮತ್ತೆ ಬಂದಳು.ಕೇಶ ಬರೆದ ಅವ್ವನ  ಕುರಿತ ಕವಿತೆಯನ್ನು ನೆನಪಿಸುತ್ತ ಇಂದು ಜಾಲತಾಣದಲ್ಲಿ ಗುಳೇದಗುಡ್ಡದ ಹಿರಿಯ‌ಕವಿ ಮಲ್ಲೊಕಾರ್ಜುನ ಬನ್ನಿಯವರು –

” ನಾನು ಓದಿದ ಹಾಗೇ ಕನ್ನಡ ಭಾಷೆಯಲ್ಲಿ ಮೊದಲು ಬರೆದ ಕವಿತೆ ಅವ್ವ ನಂತರ ನೂರಾರು ಕವಿತೆಗಳು ಹುಟ್ಟಿಕೊಂಡಿವೆ ಇನ್ನೂ ಹುಟ್ಟುತ್ತಲೇ ಇವೆ ” ಎನ್ನುತ್ತಾರೆ.

ನಂತರದಲ್ಲಿ ನೂರಾರು‌ಕವಿತೆಗಳು ಕಳೆದ ೩೦ -೪೦ ವರ್ಷಗಳಿಂದ ಕನ್ನಡ ಕವಿಗಳಿಗೆ ಅವ್ವನ ಕುರಿತ ಕವಿತೆಯ ನ್ನು ಬರೆಯಲು ಪ್ರೇರಣೆ ನೀಡಿದ‌ಕ ವಿತೆ ಹೀಗೆದೆ. ಅದು

ಈ ದಿನ ಓದಲೇ ಬೇಕಾದ ಪದ್ಯ .

ಅವ್ವನನ್ನು ತಾಯಿ ದೇವತೆ  ಎಂದು ಗುರುತಿಸಿದ್ದ ನಮ್ಮ‌ ನಾಡಿನಲ್ಲಿ ಲಂಕೇಶ ಮೊದಲ ಬಾರಿಗೆ ದೇಶಿಯ ನುಡಿಗಟ್ಟಲ್ಲಿ ಅವ್ವನ ಚಿತ್ರ ನೀಡಲು ಪ್ರಯತ್ನಿಸಿದ್ದರು ಹೀಗಾಗಿಯೇ ತನ್ನ ಸಹಜ ಸೊಗಡಿನಿಂದ ಕವಿತೆ ಎಲ್ಕರನ್ನು ಸೆಳೆಯಿತು.

ನನ್ನವ್ವ ಫಲವತ್ತಾದ ಕಪ್ಪು ನೆಲ

ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;

ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು

ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;

ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

The classmate – Indian Cultural Forum

ಕವಿತೆಯ ಆರಂಭವೇ ವಿನೂತನ. ತಾಯಿಯಯನ್ನು ಕಪ್ಪು ನೆಲಕ್ಕೆ ಹೋಲಿಸುದ ಮೊದಲ ಕನ್ಬಡದ ಕವಿತೆಯಿದು.ಅವ್ವನ ಫಲವಂತಿಕೆ ಸರ್ವರನ್ನೂ ಕಾಪಿಡುವ ಗುಣ ಇವುಗಳೆ ತುಂಬಿರುವ  ಅವ್ವನನ್ನು ಭೂಮಿಗಲ್ಕದೆ ಇನ್ನಾವುದಕ್ಕೆ ಹೋಲಿಸಲು ಸಾಧ್ಯ .ಕವಿತೆಯ‌ ಮೊದಲ ಸಾಲೇ ಅನನ್ಯ.” ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬ ಆರಂಭವೇ ರೋಮಾಂಚಿತರನ್ಬಾಗಿಸಿತು. ಅಲ್ಲಿ ಸದಾ ಹಸಿರು ತುಂಬಿರುವದನ್ನು ಮಕ್ಕಳ ಮೇಲಿನ ಮಮತೆಯನ್ನು ಕವಿ ಸೂಚಿಸುತ್ತಾರೆ..ಸುಟ್ಟಸ್ಟೂ ಕಸುವು ಎನ್ನುವ ನುಡಿಗಟ್ಟಂತೂ ಅವಳ ಶ್ರಮಜೀವನ ,ಎಂತಹ ಕಷ್ಟ ಬಂದರು ಸಹಿಸುವ ಶಕ್ತಿಯನ್ನು ಸಂಕೇತಿಸುತ್ತದೆ.” ಮಕ್ಕಳೊದ್ದರೆ ಅವಳ. ಅಂಗಾಂಗ ಪುಳಕ” ಎನ್ನುವ ಸಾಲಿಗೆ ವಿವರಣೆ ಬೇಕಿಲ್ಲ ಆಕೆ ಬದುಕಿದ್ದೇ ಸಾಹಸಿಯಾಗಿ.ಅದನ್ನು ಮುಂದಿನ ಸಾಲು ಹೇಳುತ್ತವೆ.ಆಕೆ ಅಪ್ಪನ್ನ‌ಮೆಚ್ಚಿಸಿದ್ದೇ ತನ್ನ ಸಾಹಸ ಗುಣದಿಂದ

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,

ಹೆಂಟೆಗೊಂದು ಮೊಗೆ ನೀರು ಹಿಗ್ಗಿ;

ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,

ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ

ಹೆಸರು ಗದ್ದೆಯ ನೋಡಿಕೊಂಡು,

ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಆಕೆಗೆ ಯೌವನಕ್ಕೆ ಜೊತೆಯಾದದ್ದು ದುಡಿಮೆ ಮತ್ತು ಬಡತನ.ಅದನ್ನು ತನ್ನ ಶ್ರಮದಿಂದಲೇ ಸೊಲಿಸುದಳು. ಆದರೆ ಆ ಗೆಲುವು ಅಷ್ಟು ಸರಳ ದಕ್ಕಿಲ್ಲ.ಹೂವ

ಗಂಡನ‌ ಮನೆಗೆ ಬಂದ ಮೇಲೆ ಆಕೆಗೆ ಗೊತ್ತಿದ್ದದೊಂದೇ ದುಡಿತ, ದುಡಿತ ..ಆಕೆಗೆ ತನ್ನ ಸೌಂದರ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಕ.ಅಪ್ಪನ ಜೊತೆಗೆ ಸಾಲು ಸಾಲಿಗೂ ಹೆ್ಲು‌ಕೊಟದಟು ದುಡಿದಖು.ಒಮ್ಮೊಮ್ಮೆ ಅವನನ್ನು ಮೀರಿಸಿಯೂ ದುಡಿದಳು.ಇಡೀ ಹೊಲದ ತುಣಮಬ ತುಂಬಿದ ಬೆಳೆ ಅವಳೊಡನೆ ಮಾತನಾಡಿದವು ..ಹೂವಳ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ..ಹೆಸರು ಗದ್ದೆಯಲ್ಲಿ ದುಡಿಯುತ್ತಲೇ ಯೌವಮವ ಕಳೆದ ಆಕೆಗೆ ತಾನುಟ್ಟ ಬಟ್ಟೆಯ ಬಗೆಗೂ ಆಸಕ್ತಿಯಿಲ್ಕ .ಚಿಂದೆ ಸೀರೆ ಉಟ್ಟೇ  ಬದುಕು ಸವೆಸಿದಳು. ಆಕೆ ಕ್ಷಣಕ್ಷಣಕ್ಕು ಸಾಯುವಂಥವಳು.ಬದುಕೆಂದರೆ ಪಂಚಪ್ರಾಣ.ಏನಾದರು ಕಳೆದುಕೊಂಡರೆ ಜೀವ ಹೋದಂತೆಯೆ ಎನಿಸುತ್ತುತ್ತು. ಇದನ್ನೇ ಕವಿತೆ

ಸತ್ತಳು ಈಕೆ:

ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?

ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?

ಎಷ್ಟೋ ಸಲ ಮುದುಕಿ ಅತ್ತಳು

ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;

ಎಷ್ಟುಸಲ ಹುಡುಕುತ್ತ ಊರೂರು ಅಲೆದಳು

ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಆಕೆ ಚಿಂತಿಸಿದ್ದೇ ಕಾಸಿಗೆ ಕೆಟ್ಟ ಪೈರಿಗೆ,ಕಳೆದುಕೊಂಡ ಎಮ್ಮೆಗೆ.ಈಗ ದುಡಿಯುತ್ತ ದುಡಿಯುತ್ತ ಪ್ರಾಯವೂ ಕಳೆದಿದೆ .ವಾಸ್ತವದಲ್ಲಿ .ಲೆಕ್ಕವಿಡುವವರಾರು? ಅದಕ್ಕೆ ಕವಿ “ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ”.ಎನ್ಹುತ್ತಾರೆ.ಕವಿಗೆ ಅವ್ವನ ಮುಂದೆ ಯಾವ ಸತಿ ಸಾವಿತ್ರಿ ಜಾನಕಿಯರು ಸಮನಲ್ಲ.ಏಕೆಂದರೆ ಅವರು ಪುರಾಣದವಪಾತ್ರಗಳಷ್ಟಣೆ.ಸಹಜ ಬದುಕಿದವರಲ್ಕ.ಬಹಳವಾದರೆಗಂಡನ ನೆರಳಾದವರು.ಈ ತಾಯಿ ತಪ್ಪಿದರೆ ಗಂಡ ತಪ್ಪಿದರೂ ಸುಮ್ಮನೇ ಬಿಟದಟವಳಲ್ಕ.ಅವಳೇನು ಪೂಜೆ ಪುನಸ್ಕಾರಗಳಲ್ಲಿ ಕಾಲ ಕಳೆವ ಪತಿವ್ರತೆಯಲ್ಲ.ಆಕೆಗೆ ಪತಿವ್ರತೆ ಎಂಬುದನ್ಜು ತೋರಲು ಕುಂಕುಮ ಇಡುವ ಅಗತ್ಯವೂ ಇಲ್ಲ ಕವಿಯ ಸಹಜ ಶೈಲಿ ಪದ್ಯವನ್ನು ಕಟ್ಟಿಕೊಡುವ ರೀತಿ ಅಮೋಘ.

ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;

ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;

ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;

ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;

ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಗಂಧೀಜಿ,ರಾಮಕೃಷ್ಣರ ಸತಿಯರಂತೆ ಅವಳು ಸಂಪ್ರದಾಯ ಶೀಲೆ ಅಲ್ಲ.ಗಂಡನ್ನ ಬರೀ ಗೌರವಿಸಬೇಕು ಅನ್ನೊ ಸ್ವಭಾವದವಳೂ ಅಲ್ಲ.ಅಕೆಗೆ ಮುತ್ತೈದೆ ಸಂಕೇತ‌ ಕುಂಕುಮ‌ಕೂಡ ಇಡಬೇಕಾದ ಅಗತ್ಯ ಇರಲಿಲ್ಲ.ಆಕೆ ಬದುಕಿದ್ದೆ ಬನದ‌ಕರಡಿಯ ಹಾಗೆ ಎನ್ನುವ ಕವಿ

ಬನದ ಕರಡಿಯ ಹಾಗೆ

ಚಿಕ್ಕಮಕ್ಕಳ ಹೊತ್ತು

ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.

ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:

ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.

ಈಕೆ ಉರಿದೆದ್ದಾಳು

ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿ ಎಂತಹ ಶ್ರೀಮಂತ ರೂಪಕ.ಲಂಕೇಶ ರ ಕಾವ್ಯ ಶಕ್ತಿಯೇ ಅಂಥದು.ಅವರನ್ನು ಅಡಿಗರ ನಂತರ ಕನ್ನಡ ಪದಕೋಶದ ಸಕಲವನ್ನೂಸೂರೆ ಹೊಡೆದ ಕವಿಎನ್ನುವದು ಸುಮ್ಮನೇ ಅಲ್ಲ.ಅವ್ವ ಉದಾರಿಯಲ್ಕ,ತ್ಯಾಗಮಯಿಯಲ್ಕ,.ಜಗಳಗಂಟಿ. ದುಡಿಯದವರನ್ನು ಕಂಡರೆ ನೊಂದ ನಾಯಿಯ ಹಾಗೆ ಬೈದಾಳು.ಆಕೆಯಲ್ಕಿ ಸಣ್ಣತನ ,ಕೊಂಕು ಕೆರೆದಾಟ ಎಲ್ಲ ಇವೆ.ಇವೆಲ್ಲ ಬದುಕಲ್ಲಿ ಇರುವವೇ! .ಏತಕ್ಕೆ ಜಗಳ ? ತನ್ನ ಬದುಕು ಉದ್ದಾರವಾಗಲೆಂದು.ಗಂಡ ಬೇರೆ ಕಡೆ ಹೋದರೆ ಮಗ ಕೆಟ್ಟರೆ ಉರಿದೆದ್ದಾಳು..ಆಕೆಯ ಉದ್ದಸ ಸರಿಕರ ಎದುರು ಸೋಲವಾರದೆಂದು .ಅದಕ್ಕೆ ಕವಿ ಅವಳ ಆ ಗುಣವನ್ನು

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;

ನನ್ನವ್ವ ಬದುಕಿದ್ದು

ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;

ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;

ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,

ಎಂದು ಚಿತ್ರಿಸುತ್ತಾರೆ.ಅವ್ವನ ಸಹಜ  ನಿಷ್ಠುರ ಬದುಕಿಗೆ ಕವಿ ಆಕೆಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;

ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,

ಮನೆಯಿಂದ ಹೊಲಕ್ಕೆ ಹೋದಂತೆ

ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.

ಕನ್ನಡದ ಅಜರಾಮರ ಕವಿತೆಗಳಲ್ಲಿ ಒಂದಾದ ಈ ಕವಿತೆ ತುಂಬ ನೇರ ,ಸ್ವಭಾವೋಕ್ತಿಗಳಲ್ಲಿ ಶ್ರಮಜೀವಿ ಅವ್ವನ ಚಿತ್ರ ಬಿಡಿಸಿದೆ.ಈಕೆ‌ ಕೇವಲ ಪ್ರೇಮಮಯಿ ,ತ್ಯಾಗಮಯಿ ಅವ್ವ ಅಲ್ಲ.ಹಳ್ಳಿಗಾಡಿನ ಎಲ್ಲರನ್ನು ಬೆಳೆಸಿದ ಅವ್ವ ಲಂಕೇಶರ ಅವ್ವ ಕವಿತೆ.

ಇಂತಹ ಸಾರ್ಥಕ ಕವಿತೆಯನ್ನು ಅವ್ವಂದಿರ ದಿನಕ್ಕೆ ಸಮರ್ಪಿಸುತ್ತ ನನ್ಬದೊಂದು ಗಜಲ್ ಕವಿತೆಯೊಂದಿಗೆ ಲೇಖನ ಮುಗಿಸ ಬಯಸುತ್ತೇನೆ.ಇಂದು ನಗರ ಸೇರಿದ ಬಹುತೇಕ ನಾವು ಅವ್ವನನ್ಜು ಮರೆತಿದ್ದೇವೆ ಎನ್ನುವ ವಿಷಾದವೂ ಗಜಲ್ ನಲ್ಲಿ ಅಡಗಿದೆ.

ಅವ್ವ‌- ಗಜಲ್

ಅವ್ವ‌ ತಾನಿಟ್ಟ ಕಣ್ಣೀರಿನ ಲೆಕ್ಕ ಹಾಕಬಹುದೇ ನಾವು

ಅವ್ಚ ಪಟ್ಟ ಕಷ್ಟಗಳ ಪಟ್ಟಿ ಮಾಡಬಹುದೇ ನಾವು

ಬೆಂಕಿಯಲಿ ತಾ ಬೆಂದು ಬೆಳಕನಷ್ಟೇ ನಮಗೆ ಬಿಟ್ಟವಳು

ಚಿಂದಿಯನುಟ್ಟು ಹೊಸತು ಕೊಟ್ಟದ್ದು ಹೇಳಬಹುದೆ ನಾವು

ಎದ್ದು ಬಂದೆವು ಅರ್ಧ ರಾತ್ರಿಯಲಿ ಅದೆ ಗುಡಿಸಲಲಿ ಬಿಟ್ಟು

ಒಂದು ಮಾತೂ ಹೇಳದೆ ಕ್ಷಮಿಸಿ ಬಿಟ್ಟಳು ಬರೆಯಬಹುದೆ ನಾವು

ಅರಮನೆ ಆಡಂಬರದ ಬದುಕಿನಲಿ ಈಗ ಮೆರೆಯುತ್ತಿದ್ದೇವೆ

ದೂರ‌ ಕುಳಿತೇ ಸಂಭ್ರಮಿಸಿದಳು ಬಣ್ಣಿಸಬಹುದೇ ನಾವು

ಮಡದಿ ಮಕ್ಕಳು ಒಡವೆ ವಸ್ತು ಗಳಿಕೆಯಲಿ‌ ಮುಳುಗಿದೆವು

 ಚಿಂದಿ‌ ಮನೆಯಲಿ ಬೆಂದ ದೇವತೆ ಅವಳು ನೆನೆಯಬಹುದೆ ನಾವು

ಅಣ್ಣ ತಮ್ಮ ಅಕ್ಕ ತಂಗಿ ಎನಲಿಲ್ಲ ಮರೆತು ದೂರ ನಡೆದೆವು

ಒಬ್ವರ ಮುಂದಾರೆ ಆಡಿಕೊಂಡಳೆ ಮಾತೆ ಅನ್ನಬಹುದೆ ನಾವ

ಭೂಲೋಕದಿ ಬೆಳಗಿದ ನಕ್ಷತ್ರ ಅವಳು ಯಾವ ದೇವರು ಸಾಟಿ?

ಯಯಾ ‘ ಬರಿಯ ಪದಗಳಲಿ ಬರೆದು‌  ತೀರಿಸಬಹುದೆ ನಾವು

ಇದು ಇಂದಿನ ವಾಸ್ತವ ಕೂಡ .ಇಲ್ಲದಿದ್ದರೆ ನಮ್ಮಲ್ಲಿ ವೃದ್ಧಾಶ್ರನಗಳು ಹೆಚ್ಚುತ್ತಿರಲಿಲ್ಲ.ತಂದೆ ತಾಯಿಯರನ್ನು ಹಂಚಿಕೊಂಡು ಪಾಲಿಸುವ ಮಕ್ಕಳ ಸಂಖ್ಯೆಯೂ ಕಡಿಮೆಯಿಲ್ಲ.ಅವ್ಚಂದಿರ ಅಪ್ಪಂದಿರ ದಿನದಙದು ಕವಿತೆ ಬರೆದು ಪೋಟೊ ಹಾಕಿ ಸಂಭ್ರಮಿಸುವ ಬದಲು ಹಳ್ಳಿ ಗಳಲ್ಲಿ ಇರುವ ಅಪ್ಪ ಅವ್ವರನ್ನು ನಮ್ಮ ಮನೆ ಮಕ್ಕಳೊಂದಿಗಿರಿಸಿಕೊಂಡು ಪಾಲಿಸುವವರ ಸಂಖ್ಯೆ ಸಾರ್ಥಕವಾಗಬೇಕಿದೆ.ಅಂದರೆ ಅವ್ವಂದಿರ ದಿನ ಸಾರ್ಥಕವಾದಿತು.


ಡಾ. ವಾಯ್ .ಎಮ್. ಯಾಕೊಳ್ಳಿ

Leave a Reply

Back To Top