ಅಮ್ಮಂದಿರ ದಿನದ ವಿಶೇಷ

ಕಾವ್ಯ ಸಂಗಾತಿ

ಅಮ್ಮಂದಿರ ದಿನದ ವಿಶೇಷ

ಅವ್ವ

ಮಾಜಾನ್ ಮಸ್ಕಿ

ಬಸಿರಿನಲ್ಲಿ ಉಸಿರು ಕೊಟ್ಟವಳು
ಕಣ ಕಣದಲ್ಲಿ ಹಸಿರಾಗಿ ಬದುಕಿರುವಳು
ಬೆಟ್ಟದಷ್ಟು ಧೈರ್ಯ ತುಂಬಿ
ಬದುಕು ಸುಂದರ ಎಂದು
ತೋರಿಸಿದವಳು
ಹಣೆಬರಹ ಬದಲಾದರೂ
ಕೈ ಬಿಡದ…
ಮೋಸ ಅರಿಯದ ಮುಗ್ದೆ
ಅವ್ವ

ತನ್ನ ಸೌಂದರ್ಯ ಕೆಟ್ಟು
ಹೊಟ್ಟೆಗೆ ಗೆರೆ ಬಿದ್ದರೂ
ಮಕ್ಕಳು ಕೊಟ್ಟ ನೋವನ್ನು
ಬಚ್ಚಿಟ್ಟು ಎದೆಯಲ್ಲಿ
ಕೈ ತುತ್ತು ಕೊಟ್ಟು
ಸುಂದರ ಲಾಲಿ ಹಾಡು ಹಾಡುತ್ತಾ
ತನ್ನ ನೋವು ಮರೆಯುವ ತ್ಯಾಗಮಯಿ ಅವ್ವ

ನಿಷ್ಠೆಯ ಹಾದಿಗೆ ಚೇತನ
ಅವ್ವ
ಪ್ರತಿ ಜೀವದ ಬೇರು
ಅವ್ವ
ಪ್ರೀತಿ, ವಾತ್ಸಲ್ಯದ ಶಾಂತತೆ
ಜೀವಂತಿಕೆ ಅವ್ವ
ಸಂತತಿಯ ಹಬ್ಬಿನಲ್ಲಿ
ಸದಾ ಅಮರಳು
ಅವ್ವ


ಮಾಜಾನ್ ಮಸ್ಕಿ

One thought on “ಅಮ್ಮಂದಿರ ದಿನದ ವಿಶೇಷ

  1. ಹೊಟ್ಟೆಗೆ ಗೆರೆ ಬಿದ್ದರೂ ಮಕ್ಕಳು ಕೊಟ್ಟ ನೋವನ್ನು ಎದೆಯಲಿ ಬಚ್ಚಿಟ್ಟು….‌ಸುಂದರ ಸಾಲುಗಳು ಚೆನ್ನಾಗಿದೆ ಮೇಡಂ ಕವನ.

Leave a Reply

Back To Top