ಕೆಟ್ಟಿತ್ತು ಕಲ್ಯಾಣ’ ಡಾ.ಎಂ.ಎಂ.ಕಲಬುರ್ಗಿ

ವಿಶೇಷ ಲೇಖನ

ಕೆಟ್ಟಿತ್ತು ಕಲ್ಯಾಣ’

ಡಾ.ಎಂ.ಎಂ.ಕಲಬುರ್ಗಿ

ಕೆ.ಶಿವು.ಲಕ್ಕಣ್ಣವರ

ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಡಾ.ಎಂ.ಎಂ. ಕಲಬುರ್ಗಿ ಅವರು ‘ಕಲ್ಯಾಣದ ಅವಸಾನ’ದ ದಿನಗಳನ್ನು ನೆನದು ನಾಟಕ ರೂಪದಲ್ಲಿ ಹೇಳಿದ್ದಾರೆ.

‘ಶರಣ ಚಳವಳಿ’ಯ ಅಂತ್ಯದ ಬಗೆಗೆ ಅನೇಕ ಕೃತಿಗಳು ಬಂದಿವೆಯಾದರೂ ಈ ಕೃತಿಯು ಮುಖ್ಯವಾಗಿ ನಡೆದಿರಬಹುದಾದ ಒಂದು ಒಳಸಂಚನ್ನು ಪ್ರಸ್ತಾಪಿಸುತ್ತದೆ..!

ಒಟ್ಟು ನಲವತ್ತು ದೃಶ್ಯಗಳಿರುವ ‘ಅಗ್ರಹಾರ ಸಂಸ್ಕೃತಿ’, ‘ದೇಗುಲ ಸಂಸ್ಕೃತಿ’ ಹಾಗೂ ‘ರಾಜ ಸಂಸ್ಕೃತಿ’ಯನ್ನು ಬಿಚ್ಚಿಡುತ್ತದೆ.

ಹಿಂದಿ ಮಲಯಾಳಂ ಭಾಷೆಗಳಿಗೂ ನಾಟಕ ಅನುವಾದಗೊಂಡಿದೆ. ಈ ವರೆಗೂ ಕನ್ನಡದಲ್ಲಿ ಎರಡು ಮುದ್ರಣಗಳನ್ನು ಕಂಡಿದೆ ಈ ಕೃತಿಯು.

ಕೃತಿಯ ಮಹತ್ವವನ್ನು ಹೇಳುತ್ತಾ ಕಲಬುರ್ಗಿ ಅವರು ’ಈ ನಾಟಕವನ್ನು ಬರೆಯುವಾಗ ‘ರಿಚರ್ಡ ಆಟನ್ ಬರೊ’ ನಿರ್ದೇಶಿಸಿದ ‘ಗಾಧೀ’ ಚಲನ ಚಿತ್ರ ನನ್ನ ಕಣ್ಣ ಮುಂದಿದೆ, ಈ ನಾಟಕವನ್ನು ಬರೆದವನು ನಾನಾಗಿದ್ದರೂ ಬರೆಸಿಕೊಂಡವನು ನನ್ನೊಳಗಿದ್ದ ಬಸವಣ್ಣ’ ಎಂದಿದ್ದಾರೆ..!

ಇನ್ನೂ ಡಾ.ಎಂ.ಎಂ.ಕಲಬುರ್ಗಿ ಅವರ ಪರಿಚಯಾತ್ಮಕ ಬರಹವೂ

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಡಾ.ಎಂ.ಎಂ.ಕಲಬುರ್ಗಿಯವದು. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ.

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದವರು. 1938 ರ ನವೆಂಬರ್ 28 ರಂದು ಇವರು ಜನಿಸಿದವರು. ತಾಯಿ ಗುರಮ್ಮ ಅಂತ. ತಂದೆ ಮಡಿವಾಳಪ್ಪ ಅಂತ.

ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. (1960) ಮತ್ತು  ಎಂ.ಎ. (1962) ಪದವಿ ಪಡೆದ ಇವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು ಇವರಿಗೆ.

ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ (1962) ರಾಗಿ ತಮ್ಮ ವೃತ್ತಿಜೀವನವನ್ನುಪ್ರಾರಂಭಿಸಿದರು ಡಾ.ಎಂ.ಎಂ.ಕಲಬುರ್ಗಿಯದವರು.

ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕ (1966) ರಾಗಿ ನೇಮಕಗೊಂಡವರು. ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದವರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ (1998-2001) ಗಳಾಗಿದ್ದವರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರೂ ಆಗಿದ್ದವರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದವರು.

ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನೂ ಪ್ರಕಟಿಸಿದ್ದಾರೆ. ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’, ‘ಮಾರ್ಗ’, ‘ಐತಿಹಾಸಿಕ’, ‘ಶಾಸನ ವ್ಯಾಸಂಗ’, ‘ಶಾಸನ ಸಂಪದ’, ‘ಧಾರವಾಡ ಜಿಲ್ಲೆಯ ಶಾಸನಸೂಚಿ’, ಹೀಗೆಯೇ ಡಾ.ಎಂ.ಎಂ.ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.  ‘ಶಿವಯೋಗ ಪ್ರದೀಪಿಕಾ’, ‘ಕೊಂಡಗುಳಿ ಕೇಶೀರಾಜನ ಕೃತಿಗಳು’, ‘ಬಸವಣ್ಣನ ಟೀಕಿನ ವಚನಗಳು’, ‘ಸಿರುಮನಾಯಕನ ಸಾಂಗತ್ಯ, ‘ಜಾನಪದ ಮಾರ್ಗ’ ಮತ್ತು ‘ಉತ್ತರ ಕರ್ನಾಟಕದ ಜನಪದ ಸಾಹಿತ್ಯ’ ಕೃತಿಗಳಲ್ಲದೇ ಡಾ.ಎಂ.ಎಂ.ಕಲಬುರ್ಗಿ ಅವರ  ‘ನೀರು ನೀರಡಿಸಿತ್ತು’, ‘ಕೆಟ್ಟಿತ್ತು ಕಲ್ಯಾಣ’ ಇವರ ಹಲವು ಸೃಜನಶೀಲ ಬರಹಗಳ ಸಾಲಿಗೆ ಸೇರುತ್ತವೆ..!

ಡಾ.ಎಂ.ಎಂ.ಕಲಬುರ್ಗಿಯವರ ಈ ಇಂತಹ ಸಾಹಿತ್ಯ ಬರಹಗಳಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿ, ‘ಮಾರ್ಗ-4’ ಎಂಬ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಅವರ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದಿವೆ. ಡಾ.ಎಂ.ಎಂ.ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಲಾಗಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು..!

ಇಂತಹ ಡಾ.ಎಂ.ಎಂ.ಕಲಬುರ್ಗಿಯವರು 2015 ರ ಆಗಸ್ಟ್ 30 ರಂದು ಹತ್ಯೆಗೀಡಾದರು..! ಆದರೆ ಡಾ.ಎಂ.ಎಂ.ಕಲಬುರ್ಗಿ ಅವರ ಸಾಹಿತ್ಯ ಇನ್ನೂ ನಮ್ಮಲ್ಲಿ ಹಚ್ಚಹಸಿರಾಗಿದೆ ಅಂತ ಹೇಳುತ್ತಾ ಡಾ.ಎಂ.ಎಂ.ಕಲಬುರ್ಗಿಯವರ ಬಹುಮುಖ್ಯ ಕೃತಿಯಾದ ‘ಕೆಟ್ಟಿತ್ತು ಕಲ್ಯಾಣ’ ಕೃತಿಯ ಸಂಕ್ಷಿಪ್ತ ಮಾತು ಮತ್ತು ಡಾ.ಎಂ.ಎಂ.ಕಲಬುರ್ಗಿ ಅವರ ಪರಿಚಯಾತ್ಮಕ ಬರಹವನ್ನು ಮುಗಿಸುತ್ತೇನೆ..!


 ಕೆ.ಶಿವು.ಲಕ್ಕಣ್ಣವರ

2 thoughts on “ಕೆಟ್ಟಿತ್ತು ಕಲ್ಯಾಣ’ ಡಾ.ಎಂ.ಎಂ.ಕಲಬುರ್ಗಿ

  1. ಚೆಂದ ಹಾಗೂ ಆತ್ಮೀಯ ಬರಹ

  2. ” ವೀಳ್ಯದೆಲೆ ಡಬ್ಬಿಯಲ್ಲಿ ಇನ್ನೂ ಹಸಿರಾಗಿಯೇ ಇವೆ “.

    ನುಗ್ಗಿದ ಗುಂಡಿಗೆ ಹಣೆ ಬರಹ ಸಿಕ್ಕಿಲ್ಲ ಸಿಕ್ಕಿದ್ದ ವಚನ ಸಾಹಿತ್ಯ ಅವಕ್ಕೆ ಅರ್ಥ ವಾಗಿಲ್ಲ!

    ಹಣೆ ಬೆವರಿನಿಂದ ಪಸೆಯುತ್ತಿದ್ದ ಸತ್ಯ ಸಂಶೋಧನೆ , ಹಣೆಗೆ ಗುಂಡು ಹೊಕ್ಮೇಲೆ ರಂದ್ರ ದಿಂದ ಆಚೆ ಬಂದಿದೆ ಪಕ್ಷಿಯಾಗಿ,

    ಆ ಪಕ್ಷಿ ಲಕ್ಷಾಂತರ ಹೃದಯಗೂಡಲ್ಲಿ ಆಶ್ರಯ ಪಡೆದಿದೆ ,

    ರಕ್ತ ಸಿಕ್ತವಾದ ಲುಂಗಿ ಅಂಗಿ ಬೆಚ್ಚನೆಯ ಮೇಲಂಗಿ ಮುದ್ದೆಮಾಲುಗಳಾಗಿ ಮುದುಡಿ ಕಾಯುತ್ತಿವೆ ಸಾಕ್ಷಿದಾರನ ಗುರುತಿಗಾಗಿ,

    ಹಾರಿದ ಗುಂಡುಗಳು ,ಬಯಲು ಅಂಗೈಯಲ್ಲಿ ಹೌಹಾರಿ ಕುಳಿತಿವೆ, ವಾರಸುದಾರನ ಬರುವಿಕೆಗೆ,

    ಹಲವಾರ ಬೆರಳುಗಳು ಪರಸ್ಪರ ಒತ್ತಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿವೆ , ಸಮಾಧಿಯ ಮುಂದೆ ,

    ವೀಳ್ಯದೆಲೆ ಡಬ್ಬಿಯಲ್ಲಿ ಇನ್ನೂ ಹಸಿರಾಗಿಯೇ ಇವೆ , ಕಲಬುರ್ಗಿಯವರ ನಾಲಿಗೆ ಕೆಂಪು ಮಾಡಲು, ಏನೋ ಎಂತೋ , ಉಮ್ಮಕ್ಕಳ ಸೀರೆ ಇನ್ನೂ ಹಸಿಯಾಗಿದೆ ,

    ಮೂರು ಹಿಡಿ ಹಾಕಿದ ಮಣ್ಣಿನ ಕಣಗಳು ಉಗುರುನಲ್ಲಿ ಹಾಗೆಯೇ ಸಿಕ್ಕುಕೊಂಡಿವೆ. ಎರಡೂ ಮೂರು ವಸಂತಕಾಲವಾಯ್ತು , ಪಾದಗಳು ಮಣ್ಣಲ್ಲಿ ಕರಗಿ .

    – ವಿಜಯ ಅಮೃತರಾಜ್.
      99458 73626.

Leave a Reply

Back To Top